ಬೆಂಗಳೂರು: ಮನೆಗೆಲಸ ಮಾಡುವ ಕಾರ್ಮಿಕರಿಗೆ ಕಡ್ಡಾಯ ವಾರದ ರಜೆ, ಇಎಸ್ ಐ,ಭವಿಷ್ಯ ನಿಧಿ, ಗ್ರಾಚ್ಯುಟಿ ಮತ್ತು ಪಿಂಚಣಿ, ಕನಿಷ್ಠ ವೇತನ, ವಾರ್ಷಿಕ ಬೋನಸ್, ನಿಯಮಿತ ಸಂಬಳ ಹೆಚ್ಚಳ ಸೇರಿದಂತೆ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗೃಹ ಕಾರ್ಮಿಕರ ಯೂನಿಯನ್ ಗಳ ಒಕ್ಕೂಟವು ಕಾರ್ಮಿಕ ಇಲಾಖೆಯ ಅಪರ ಆಯುಕ್ತ ಡಾ ಜಿ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದೆ.
ಬೆಂಗಳೂರಿನ ಕಾರ್ಮಿಕ ಭವನದಲ್ಲಿ ಒಕ್ಕೂಟದ ಮುಖಂಡರಾದ ರೇಖಾ, ಮೆಹೆರಾಜ್ ಬೇಗಂ, ಶರಣಮ್ಮ, ನರಸಮ್ಮ, ರೋಸ್ ಮೇರಿ, ಮಾಲನ್ ಮುಜಾವರ್, ಮಾಹದೇವಿ ಚಾಕರ್ರೆ, ಸಾಹೇರ ಬಾನು, ಜಬೀನಾ ಖಾನಂ, ಕರಿಬಸಪ್ಪ ಎಮ್, ಸಿಂಥಿಯಾ, ಸಹಾಯ, ಮೀನಾಕ್ಷಿ ಶಿಂಘೆ ಮನವಿ ಸಲ್ಲಿಸಿದರು.
ಕಾರ್ಮಿಕರು ಮತ್ತು ಉದ್ಯೋಗದಾತರ ನೋಂದಣಿ ಮತ್ತು ಮನೆಗೆಲಸ ಕಾರ್ಮಿಕರನ್ನು ನೇಮಿಸಿಕೊಳ್ಳುವ ಆನ್ಲೈನ್ ಪ್ಲಾಟ್ಫಾರ್ಮ್ಗಳನ್ನು ನಿಯಂತ್ರಿಸಬೇಕು. ಸಾಮಾಜಿಕ ಭದ್ರತೆ: ESI, ಭವಿಷ್ಯ ನಿಧಿ, ಗ್ರಾಚ್ಯುಟಿ ಮತ್ತು ಪಿಂಚಣಿ ಅಡಿಯಲ್ಲಿ ಕವರೇಜ್ ಮಾಡಲೇಬೇಕು. ನ್ಯಾಯಯುತ ವೇತನ: ಕನಿಷ್ಠ ವೇತನ, ವಾರ್ಷಿಕ ಬೋನಸ್, ನಿಯಮಿತ ಸಂಬಳ ಹೆಚ್ಚಳ ಮತ್ತು ಜೀವನಾಧಾರಿತ ವೇತನದ ಅನುಷ್ಠಾನ. ಕಡ್ಡಾಯ ವಾರದ ರಜೆ, ವೇತನ ಸಹಿತ ರಜೆ, ವಜಾಗೊಳಿಸುವ ಮುನ್ನ ಸೂಚನೆ, ಬೇರ್ಪಡಿಕೆ (ಸೇವೆರೆನ್ಸ್ )ವೇತನ ನೀಡಬೇಕು ಎಂದು ಒಕ್ಕೂಟವು ಮನವಿ ಮಾಡಿಕೊಂಡಿದೆ.
ಲೈಂಗಿಕ ಕಿರುಕುಳ, ಬಾಲ ಕಾರ್ಮಿಕರ ನಿಷೇಧ, ಆರೋಗ್ಯ ಸೇವೆ ಮತ್ತು ಔದ್ಯೋಗಿಕ ಸುರಕ್ಷತೆಯ ಬಲವಾದ ಕಾರ್ಯವಿಧಾನಗಳು. ಜಾತಿ ಆಧಾರಿತ ತಾರತಮ್ಯದ ವಿರುದ್ಧ ರಕ್ಷಣೆ ಒದಗಿಸಬೇಕು. ಗುತ್ತಿಗೆದಾರರ ನಿಯಂತ್ರಣದೊಂದಿಗೆ ಕಳ್ಳಸಾಗಣೆ ಮತ್ತು ಶೋಷಣೆಯ ವಿರುದ್ಧ ರಕ್ಷಣೆ. ಸಾಮಾಜಿಕ ಭದ್ರತಾ ಮಂಡಳಿ ಮತ್ತು ILO ಕನ್ವೆನ್ಷನ್ 189: ಮೀಸಲಾದ ಮಂಡಳಿಯನ್ನು ಸ್ಥಾಪಿಸಿ ಮತ್ತು ಅಂತರರಾಷ್ಟ್ರೀಯ ಮಾನದಂಡಗಳನ್ನು ಸಂಯೋಜಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನೆಗೆಲಸ ಕಾರ್ಮಿಕರು ಮತ್ತು ಉದ್ಯೋಗದಾತರ ಕಡ್ಡಾಯ ನೋಂದಣಿ ಮಾಡಿಕೊಳ್ಳಬೇಕು. ಕಾರ್ಮಿಕರಿಗೆ ನಿಯಮಗಳು, ಷರತ್ತುಗಳು, ಅರ್ಹತೆಗಳು ಮತ್ತು ID ಕಾರ್ಡ್ಗಳನ್ನು ನನೀಡಬೇಕು.
ಗೌರವಾನ್ವಿತ ನಿವೃತ್ತಿಗಾಗಿ ವೃದ್ಧಾಪ್ಯ ಪಿಂಚಣಿ. ಜೀವನಾಧಾರಿತ ವೇತನ, ಕನಿಷ್ಠ ವೇತನದ ಅನುಷ್ಠಾನ. ಒಪ್ಪಿದ ಸಮಯವನ್ನು ಮೀರಿದ ಕೆಲಸಕ್ಕೆ ಅಧಿಕಾವಧಿ ವೇತನ. ಕೆಲಸದಲ್ಲಿ ಸಮಾನತೆ ಮತ್ತು ಘನತೆ ಬಲವಾದ ರಕ್ಷಣೆ ಲೈಂಗಿಕ ಕಿರುಕುಳ, ಜಿಲ್ಲಾ ICC ಗಳನ್ನು ವಿಶೇಷ ಕಾರ್ಯವಿಧಾನಗಳೊಂದಿಗೆ ರಚಿಸಬೇಕು. ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕು. ಮಕ್ಕಳ ಶೋಷಣೆಯನ್ನು ತಡೆಗಟ್ಟಲು ಮನೆಕೆಲಸಕ್ಕೆ ಪ್ರವೇಶಿಸಲು ಕಾನೂನುಬದ್ಧ ವಯಸ್ಸನ್ನು ನಿಗದಿಗೊಳಿಸಬೇಕು ಎಂದು ಕೋರಿದೆ.
ಸುಪ್ರೀಂ ಕೋರ್ಟ್ನ (28 ಜನವರಿ 2025) ನಿರ್ದೇಶನದಂತೆ, ಮುಂಬರುವ ಕಾನೂನು ಚೌಕಟ್ಟಿನಲ್ಲಿ ಈ ಬೇಡಿಕೆಗಳನ್ನು ಈಡೇರಿಸುವಂತೆ ಒಕ್ಕೂಟವು ಮನವಿ ಮಾಡಿಕೊಂಡಿದೆ.