023 ರಂದು ಕಲಬುರ್ಗಿಯಲ್ಲಿ ಬಿ.ಆರ್.ಪಾಟೀಲರು ಹಾಗೂ ನಾವು ಸೇರಿ ಮಾಧ್ಯಮಗೋಷ್ಠಿ ನಡೆಸಿ 6670 ನಕಲಿ ಅರ್ಜಿಗಳು ಆನ್ ಲೈನ್ ಮೂಲಕ ಮತಪಟ್ಟಿಯಿಂದ ಹೆಸರು ಕೈ ಬಿಡುವಂತೆ ಸಲ್ಲಿಕೆಯಾಗಿರುವುದನ್ನು ಬಹಿರಂಗಗೊಳಿಸಿದ್ದೆವು. ಮತಪಟ್ಟಿಯಿಂದ ಹೆಸರನ್ನು ಕೈ ಬಿಡುವ ಬಗ್ಗೆ 20.02.2023 ರಂದು ದೆಹಲಿಯ ಮುಖ್ಯಚುನಾವಣಾಧಿಕಾರಿಯವರಿಗೆ ನನ್ನದೇ ಲೆಟರ್ ಹೆಡ್ ಮೂಲಕ ಪತ್ರ ಬರೆದು ದೂರು ಸಲ್ಲಿಸಲಾಯಿತು. ಅಂದಿನ ಕಲಬುರ್ಗಿ ಎ.ಸಿ ಆಗಿದ್ದ ಮಮತಾ ಅವರು 21.02.2023 ರಂದು ಎಫ್ ಐಆರ್ ದಾಖಲಿಸುತ್ತಾರೆ. ಈ ಪ್ರತಿಯಲ್ಲಿ ಆಳಂದ ಕ್ಷೇತ್ರದ 6670 ಮತದಾರರನ್ನು ಅನಧಿಕೃತವಾಗಿ ಕೈ ಬಿಟ್ಟಿರುವ ಬಗ್ಗೆ ಬಿ.ಆರ್.ಪಾಟೀಲ್ ಅವರು ಸಲ್ಲಿಸಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಾಥಮಿಕ ತನಿಖೆಯ ನಂತರ ಬಿ.ಆರ್.ಪಾಟೀಲ್ ಅವರ ಹೇಳಿಕೆ ನಿಜ ಎಂದು ರಿಟರ್ನಿಂಗ್ ಅಧಿಕಾರಿಯೊಬ್ಬರು ಹೇಳುತ್ತಾರೆ. 6,180 ವ್ಯಕ್ತಿಗಳಲ್ಲಿ ಕೇವಲ 24 ಮಾತ್ರ ಪ್ರಾಮಾಣಿಕ ಅರ್ಜಿಗಳಾಗಿದ್ದು, 5994 ಮತಗಳಲ್ಲಿ ಯಾರೂ ಸಹ ಅರ್ಜಿಯನ್ನೇ ಸಲ್ಲಿಸಿಲ್ಲ ಎಂದು ಹೇಳಲಾಗಿದೆ. ಇದು ಹೇಗಾಯಿತು ತಿಳಿದಿಲ್ಲ ಎಂದು ಅಧಿಕಾರಿಗಳೇ ಹೇಳಿದ್ದಾರೆ. ಈ ಬಗ್ಗೆ ತಂತ್ರಜ್ಞಾನದ ಮೂಲಕ ಪರಿಶೀಲನೆ ಮಾಡಿದಾಗ ಅರ್ಜಿ ಅಲ್ಲಿಸಿದ ಮೊಬೈಲ್ ನಂಬರ್ ಗಳು ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ ಮೂಲದವಾಗಿದ್ದು, ಹೆಚ್ಚು ತನಿಖೆ ನಡೆಸ ಬೇಕಾಗಿದೆ ಎಂದು ಅವರೇ ಹೇಳುತ್ತಾರೆ. ಓಟಿಪಿ ಐಪಿ ಅಡ್ರೆಸ್ ಸೇರಿದಂತೆ ಇತರೇ ತಾಂತ್ರಿಕ ಅಂಶಗಳನ್ನು ನೀಡಿದರೆ ತನಿಖೆ ಮುಂದುವರೆಸಬಹುದು ಎಂದು ಅಧಿಕಾರಿ ಹೇಳುತ್ತಾರೆ. ಆದರೆ ಮುಖ್ಯಚುನಾವಣಾ ಅಧಿಕಾರಿಯವರು ಎಲ್ಲಾ ಮಾಹಿತಿ ನೀಡಲಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ.
ಚುನಾವಣಾ ಆಯೋಗಕ್ಕೆ ಸಾಮಾನ್ಯ ಪ್ರಜ್ಞೆ ಇಲ್ಲ ಎಂದು ಅನಿಸುತ್ತದೆ ಏಕೆಂದರೆ ರಾಹುಲ್ ಗಾಂಧಿ ಅವರು ಮತದಾರರ ಪಟ್ಟಿಯಿಂದ ಹೆಸರನ್ನು ಕೈ ಬಿಡಲು ಆನ್ ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳದೇ ಇದ್ದರೂ ಸುಮ್ಮನೆ ಆರೋಪ ಮಾಡುತ್ತಿದೆ. ರಾಹುಲ್ ಗಾಂಧಿ ಅವರು ಹೇಳಿದ್ದು ಫಾರ್ಮ್ ನಂ. 7 ದುರುಪಯೋಗವಾಗುತ್ತಿದೆ ಎಂದು ಮಾತ್ರ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಪ್ರಶ್ನೆ ಮಾಡಿರುವುದು ಚುನಾವಣಾ ಆಯೋಗವನ್ನು. ಆದರೆ ಉತ್ತರ ನೀಡಲು ಮುಂದಾಗುತ್ತಿರುವುದು ಬಿಜೆಪಿ. ಸಂಬಿತ್ ಪಾತ್ರ, ಗಜೇಂದ್ರ ಸಿಂಗ್, ಪಿ.ಸಿ.ಮೋಹನ್, ದಿನೇಶ್, ಕೇಶವ್ ಪ್ರಸಾದ್ ಮೌರ್ಯ, ಕಿಶನ್ ಸಿಂಗ್, ವಿಷ್ಣು ದೇವ ಸಿಂಗ್, ಆರ್.ಅಶೋಕ್ ಎಂದು ವಾಗ್ದಾಳಿ ನಡೆಸಿದರು.
ಬಿ.ಆರ್.ಪಾಟೀಲ್ ಅವರು 2023 ರಲ್ಲಿ ಈ ವಿಚಾರವನ್ನು ಹೊರಗೆಡವಿದಾಗ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದದ್ದು ಬಿಜೆಪಿ ಸರ್ಕಾರ. ಬಿಜೆಪಿ ನೇಮಕ ಮಾಡಿದ್ದ ಅಧಿಕಾರಿಗಳೇ ಈ ಎಲ್ಲಾ ಪತ್ರ ಬರೆದಿದ್ದಾರೆ. ಮಾಹಿತಿ ನೀಡಲು ಏಕೆ ಚುನಾವಣಾ ಆಯೋಗ ಹೆದರುತ್ತಿದೆ ಎಂದು ಪ್ರಶ್ನಿಸಿದರು.
ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಳೆರಡೂ ಶುದ್ದ ಸುಳ್ಳು ಹೇಳುತ್ತಿವೆ. ಈ ಎಲ್ಲಾ ವಿಚಾರಗಳ ಬಗ್ಗೆ ಚುನಾವಣಾ ಆಯೋಗಗಳು ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು.
ಶಾಸಕರಾದ ಬಿ.ಆರ್ ಪಾಟೀಲ್ ಮಾತನಾಡಿ 2023ರ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದ ಪರವಾಗಿರುವ 6018 ಮತದಾರರ ಹೆಸರನ್ನು ಕೈಬಿಡಲು ಬೇರೆಯವರಿಂದ ಮನವಿ ಸಲ್ಲಿಸುವಂತೆ ಮಾಡಿದ್ದರು. ನಂತರ ನಾನು ಪ್ರಿಯಾಂಕ್ ಖರ್ಗೆ ಹಾಗೂ ರಮೇಶ್ ಬಾಬು ಅವರು ಮನೋಜ್ ಕುಮಾರ್ ಮೀನಾ ಅವರಿಗೆ ದೂರು ನೀಡಿದ್ದೆವು.
ಗೃಹ ಸಚಿವರಾದ ಪರಮೇಶ್ವರ್ ಅವರು ಈ ಪ್ರಕರಣವನ್ನು ಸಿಐಡಿಗೆ ವಹಿಸಿದರು. ಸುಮಾರು 10 ಬಾರಿ ಸಿಐಡಿ ತನಿಖೆ ಕುರಿತು ವಿಚಾರಿಸಿದಾಗ ನಮಗೆ ಚುನಾವಣಾ ಆಯೋಗದಿಂದ ಸಹಕಾರ ಸಿಗುತ್ತಿಲ್ಲ. ಹೀಗಾಗಿ ನಾವು ಈ ಪ್ರಕರಣದಲ್ಲಿ ಅಸಹಾಯಕರು ಎಂದು ತಿಳಿಸಿದರು ಎಂದರು.
ಇಂತಹ ಗೋಲ್ ಮಾಲ್ ಮೂಲಕ ನನ್ನನ್ನು ಸೋಲಿಸುವ ಷಡ್ಯಂತ್ರ ರೂಪಿಸಲಾಗಿತ್ತು. ಬಿಜೆಪಿ ಹಾಗೂ ಚುನಾವಣಾ ಆಯೋಗ ಸೇರಿ ಈ ಸಂಚು ರೂಪಿಸಿದೆ. ಒಂದು ವೇಳೆ ಈ ಮತಗಳು ಡಿಲೀಟ್ ಆಗಿದ್ದರೆ ನಾನು ಸುಮಾರು ಒಂದೂವರೆ ಸಾವಿರ ಮತಗಳಿಂದ ಸೋಲುತ್ತಿದ್ದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಈ ರೀತಿ ಹೈಜಾಕ್ ಮಾಡುವ ಕೆಲಸವನ್ನು ಚುನಾವಣಾ ಆಯೋಗವೇ ಮಾಡುತ್ತಿದೆ. ಈ ವಿಚಾರವಾಗಿ ರಾಹುಲ್ ಗಾಂಧಿ ಅವರು ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುತ್ತಿದ್ದು, ಈ ವಿಚಾರವಾಗಿ ಸಧ್ಯದಲ್ಲೇ ಹಡ್ರೋಜನ್ ಬಾಂಬ್ ಹಾಕಲಿದ್ದಾರೆ ಎಂದರು.
ಈ ಮತಗಳ್ಳತನ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಬೇಕಾದರೆ ಸಿಐಡಿ ಕೇಳಿರುವ ಎಲ್ಲಾ ಮಾಹಿತಿಯನ್ನು ಆಯೋಗ ಒದಗಿಸಬೇಕು. ನಿನ್ನೆ ರಾಜ್ಯ ಚುನಾವಣಾ ಆಯೋಗದ ಜಂಟಿ ಮುಖ್ಯ ಚುನಾವಣಾಧಿಕಾರಿ ಪ್ರಿನ್ಸಿಪಲ್ ಸೆಕ್ರೆಟರಿ ಅವರಿಗೆ ಪತ್ರ ಬರೆದು, ಎಲ್ಲಾ ಅಗತ್ಯ ದಾಖಲೆ ನೀಡಿದ್ದೇವೆ ಎಂದು ಹೇಳಿದ್ದಾರೆ. ಇದು ಸಂಪೂರ್ಣ ಸುಳ್ಳು. ಅವರು ಸಂಪೂರ್ಣ ದಾಖಲೆ ನೀಡಿದ್ದರೆ ಸಿಐಡಿ ಅವರು 18 ಬಾರಿ ಏಕೆ ಪತ್ರ ಏಕೆ ಬರೆಯುತ್ತಿತ್ತು ಎಂದು ಪಾಟೀಲ್ ಅವರು ಪ್ರಶ್ನಿಸಿದರು