ಕೋಲಾರ: ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದ ಯೋಧ ಮುನಿನಾರಾಯಣ ಅವರು ಹೃದಯಾಘಾತದಿಂದ ಸಾವನ್ನಪ್ಪಿರುವ ದುರಂತ ಘಟನೆ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ತಾಯಲೂರು ಹೋಬಳಿ ಆಚಂಪಲ್ಲಿ ಗ್ರಾಮದಲ್ಲಿ ನಡೆದಿದೆ. ಬರ್ಮಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ಎರಡು ತಿಂಗಳ ಹಿಂದೆ ರಜೆ ಪಡೆದು ಊರಿಗೆ ಬಂದಿದ್ದರು. ತಡರಾತ್ರಿ ಮಲಗಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮುನಿನಾರಾಯಣ ಅವರು ತಂದೆ ತಾಯಿˌ ಪತ್ನಿˌ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.ಮೃತ ಮುನಿನಾರಾಯಣ ರವರ ಅಂತ್ಯಕ್ರಿಯೆಯು ಅವರ ಸ್ವ ಗ್ರಾಮ ಆಚಂಪಲ್ಲಿಯಲ್ಲಿ ನಡೆಯಲಿದ್ದು ಹಿರಿಯ ಅಧಿಕಾರಿಗಳು, ತಹಶೀಲ್ಧಾರ್, ಜಿಲ್ಲಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.