ಎರಡೆರಡು ವೋಟರ್‌ ಐಡಿ ಇಟ್ಟುಕೊಳ್ಳಲು ಚುನಾವಣಾ ಆಯೋಗ ಬಿಜೆಪಿಯವರಿಗೆ ಸಹಾಯ ಮಾಡಿದೆ: ಆರ್‌ ಜೆ ಡಿ ಮುಖಂಡ ತೇಜಸ್ವಿ ಯಾದವ್ ಆರೋಪ

Most read

ಪಟನಾ: ನವಂಬರ್‌ ನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಬಿಹಾರದಲ್ಲಿ ಮತಗಳನ್ನು ಕಳವು ಮಾಡುವ ಉದ್ದೇಶ ಹೊಂದಿರುವ ಬಿಜೆಪಿಗೆ ಚುನಾವಣಾ ಆಯೋಗ ನೆರವು ನೀಡುತ್ತಿದೆ ಎಂದು ರಾಷ್ಟ್ರೀಯ ಜನತಾ ದಳದ (ಆರ್‌ ಜೆ ಡಿ) ನಾಯಕ ತೇಜಸ್ವಿ ಯಾದವ್‌ ಇಂದು ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ನಾಯಕರು ಎರಡೆರಡು ಮತದಾರರ ಗುರುತಿನ ಚೀಟಿಗಳನ್ನು ಇಟ್ಟುಕೊಳ್ಳಲು ಚುನಾವಣಾ ಆಯೋಗ ಸಹಾಯ ಮಾಡುತ್ತಿದೆ. ಮತಗಳನ್ನು ಕದಿಯುವ ಉದ್ದೇಶದಿಂದ ಚುನಾವಣಾ ಆಯೋಗವು ಬಿಜೆಪಿ ಜತೆ ಕೈ ಜೋಡಿಸಿದೆ ಎನ್ನುವುದು ದೃಢಪಟ್ಟಿದೆ.  ಚುನಾವಣಾ ಆಯೋಗ ಪ್ರಕಟಿಸಿರುವ ಮೊದಲ ಹಂತದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ ಐ ಆರ್‌) ಮತದಾರರ ಕರಡು ಪಟ್ಟಿಯನ್ನು ಮತಗಳ ದರೋಡೆಯಾಗಿದೆ ಎಂದು ಅವರು ಆಪಾದಿಸಿದ್ದಾರೆ.

ಮುಜಾಫರ್‌ ಪುರ ಮೇಯರ್‌ ನಿರ್ಮಲಾ ದೇವಿ ಎರಡು ಮತದಾರರ ಗುರುತಿನ ಚೀಟಿ ಇಟ್ಟುಕೊಂಡಿದ್ದಾರೆ. ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಲು ಉದ್ದೇಶಿಸಿರುವ ನಿರ್ಮಲಾ ದೇವಿ ಅವರು, ಎಸ್‌ ಐಆರ್‌ ಕರಡು ಪಟ್ಟಿ ಪ್ರಕಾರ ಒಂದೇ ವಿಧಾನಸಭಾ ಕ್ಷೇತ್ರದ ಎರಡು ವೋಟರ್‌ ಐಟಿ ಹೊಂದಿದ್ದಾರೆ. ಅವರ ಕುಟುಂಬದ ಇತರ ಸದಸ್ಯರೂ ಬೇರೆ ಬೇರೆ ಮತಗಟ್ಟೆಗಳ ಎರಡೆರಡು ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂದು ಸಾಕ್ಷಿಗಳನ್ನು ಪ್ರದರ್ಶಿಸಿದ್ದಾರೆ.

More articles

Latest article