ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ವಿಚಾರಣೆ; ದರ್ಶನ್‌ ಪವಿತ್ರಾಗೌಡ ಹಾಜರು; ಸೆ.9 ಕ್ಕೆ ಮುಂದೂಡಿಕೆ

Most read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಕುರಿತು ಬೆಂಗಳೂರಿನ 64ನೇ ಸೆಷನ್ಸ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಪ್ರಕರಣದ ಆರೋಪಿಗಳಾದ ಚಿತ್ರನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಬಹುತೇಕ ಆರೋಪಿಗಳು ಇಂದು ಹಾಜರಾಗಿದ್ದರು. ಆದರೆ,  ಎ-10 ವಿನಯ್ , ಎ-15 ,ಕಾರ್ತಿಕ್ ಹಾಗೂ ಎ-16 ಕೇಶವಮೂರ್ತಿ ಮತ್ತು ಎ-17 ನಿಖಿಲ್  ಕೋರ್ಟ್​​ಗೆ ಹಾಜಾರಾಗಿರಲಿಲ್ಲ.

ಇಂದು ಪ್ರಕರಣದ ಎಲ್ಲಾ ಆರೋಪಿಗಳು ಹಾಜಾರಾದರೆ ಇಂದೇ ಚಾರ್ಜಸ್ ಫ್ರೇಮ್ ಮಾಡುವ ಸಾದ್ಯತೆ ಇತ್ತು.  ಹೀಗಾಗಿ, ವಿಚಾರಣೆಯನ್ನು ಸೆಪ್ಟೆಂಬರ್ 9 ಕ್ಕೆ ಮುಂದೂಡಲಾಗಿದೆ. ನ್ಯಾಯಾಧೀಶರಾದ ಐ.ಪಿ.ನಾಯ್ಕ್ ಅವರು ಆ ದಿನ ಪ್ರಕರಣದ ಎಲ್ಲಾ ಆರೋಪಿಗಳು ಹಾಜರು ಇರಬೇಕು ಎಂದು ಆದೇಶಿಸಿದ್ದಾರೆ.

ಚಾರ್ಜ್ ಫ್ರೇಮ್ ಎಂದರೇನು?

ಚಾರ್ಜ್ ಫ್ರೇಮ್ ಎಂದರೆ ದೋಷಾರೋಪ ಹೊರಿಸುವುದು‌. ಯಾವ ಯಾವ ಸೆಕ್ಷನ್​ಗಳ ಅಡಿಯಲ್ಲಿ ಆರೋಪ ಇದೆ ಎಂದು ನ್ಯಾಯಾಲಯದಲ್ಲಿ ನ್ಯಾಯಾಧೀಶರು ಆರೋಪ ಹೊರಿಸುತ್ತಾರೆ. ನಂತರ ಆ ಸೆಕ್ಷನ್ ​​ಗಳ ಅಡಿಯಲ್ಲಿ ವಾದ ಪ್ರತಿವಾದ ನಡೆಯುತ್ತದೆ. ಈ ಪ್ರಕ್ರಿಯೆಯಿಂದ ಸಹಜವಾಗಿಯೇ ಆರೋಪಿಗಳಿಗೆ ಆತಂಕ ಎದುರಾಗಿದೆ.

More articles

Latest article