ಧರ್ಮಸ್ಥಳ: ಧರ್ಮಸ್ಥಳ ಸಂಘ ಮತ್ತಿತರ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಬೇಸತ್ತು ಮಂಜುನಾಥ್ ಹೆಚ್. ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ. 37 ವರ್ಷದ ಕುರುವಳ್ಳಿ ನಿವಾಸಿಯಾದ ಮಂಜುನಾಥ್ ಹೆಚ್.(ಟಿಪ್ಪರ್ ಮಂಜು) ಲಾರಿ ಮಾಲೀಕರಾಗಿದ್ದರು. ಆದರೆ ಸಾಲ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಇಬ್ಬರು ಗಂಡು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ.
ಧರ್ಮಸ್ಥಳ ಸಂಘ ಹಲವು ದಶಕಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಸಾಲ ನೀಡುತ್ತಾ ಬಂದಿದೆ. ಈ ಸಂಘ ಹಚ್ಚಿನ ಬಡ್ಡಿಯನ್ನು ಪಡೆಯುತ್ತದೆ ಎಂಬ ಆರೋಪವೂ ಕೇಳಿ ಬಂದಿದೆ. ಇತ್ತೀಚೆಗೆ ಸಹಕಾರ ಸಚಿವ ಕೆ ಎನ್ ರಾಜಣ್ಣ ಮಾತನಾಡುತ್ತಾ ಧರ್ಮಸ್ಥಳ ಸಂಘ ಮೈಕ್ರೋ ಫೈನಾನ್ಸ್ ವ್ಯಾಪ್ತಿಯಲ್ಲಿ ಬರುವುದಿಲ್ಲ. ಅವರು ಗ್ರಾಮೀಣ ಯೋಜನೆ ಎಂದು ಮಾಡಿಕೊಂಡಿದ್ದಾರೆ. ಸ್ವ-ಸಹಾಯ ಸಂಘ ರಚಿಸಿ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಧರ್ಮಸ್ಥಳದ ಹಣ ಅನ್ನುತ್ತಿದ್ದಂತೆ ಯಾರೂ ಸಹ ಸಾಲ ಉಳಿಸಿಕೊಳ್ಳಲ್ಲ. ಈ ಸಂಘ ಕಿರುಕುಳ ನೀಡಿದೆ ಎಂದು ಯಾರೊಬ್ಬರೂ ನಮಗೆ ದೂರು ನೀಡಿಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.