ಧರ್ಮಸ್ಥಳ ಹತ್ಯೆಗಳು:3 ದಶಕಗಳ ಮೃತದೇಹಗಳ ಮಾಹಿತಿ ಸಂಗ್ರಹಿಸುತ್ತಿರುವ ಎಸ್‌ ಐಟಿ;  9ನೇ ಜಾಗದಲ್ಲಿ ಕುರಹು ಸಿಗಲಿದೆಯೇ?

Most read

ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ದಶಕಗಳಿಂದೀಚೆಗೆ ಗುರುತು ಪತ್ತೆಯಾಗದೆ ಎಷ್ಟು ಮೃತ ದೇಹಗಳನ್ನು ವಿಲೇವಾರಿ ಮಾಡಲಾಗಿದೆ ಎಂಬ ಮಾಹಿತಿಯನ್ನು ವಿಶೇಷ ತನಿಖಾ ತಂಡ (ಎಸ್‌ ಐಟಿ) ಕಲೆ ಹಾಕುತ್ತಿದೆ.

ಧರ್ಮಸ್ಥಳ ಗ್ರಾಮ ಪಂಚಾಯಿತಿಯು, ಈ ಸಂಬಂಧದ ದಾಖಳೆಗಳನ್ನು ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ನಡೆದಿದ್ದ ಅಪರಾಧ ಕೃತ್ಯಗಳ ಮೃತದೇಹಗಳನ್ನು ನೇತ್ರಾವತಿ ಸಮೀಪದ ಅರಣ್ಯದಲ್ಲಿ ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ (ಧರ್ಮಸ್ಥಳ ಠಾಣೆಯ ವ್ಯಾಪ್ತಿ ಪ್ರದೇಶವು ಈ ಹಿಂದೆ ಬೆಳ್ತಂಗಡಿ ಠಾಣೆ ವ್ಯಾಪ್ತಿಯಲ್ಲಿತ್ತು) ಮೂರು ದಶಕಗಳಿಂದ ಈಚೆಗೆ ದಾಖಲಾಗಿರುವ ಅಸಹಜ ಸಾವುಗಳ ಕುರಿತ ವಿವರಗಳನ್ನೂ ಎಸ್‌ಐಟಿ ಸಂಗ್ರಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಎರಡು ಕಡೆ ಶುಕ್ರವಾರ ಶೋಧ ನಡೆಲಾಯಿತದರೂ ಮೃತದೇಹಗಳ ಯಾವುದೇ ಕುರುಹು ಪತ್ತೆಯಾಗಿಲ್ಲ.

ಏಳನೇ ಸ್ಥಳದಲ್ಲಿ ಯಂತ್ರದ ಮೂಲಕ 6 ಅಡಿಗಳಷ್ಟು ಆಳಕ್ಕೆ ಅಗೆದ ಬಳಿಕವೂ ಅಲ್ಲಿ ಅವಶೇಷಗಳ ಕುರುಹು ಸಿಗಲಿಲ್ಲ. ಎಂಟನೇ ಜಾಗವನ್ನು ಮಧ್ಯಾಹ್ನ ಊಟದ ವಿರಾಮದ ಬಳಿಕ ಅಗೆಯಲಾಯಿತು. ಅಲ್ಲಿಯೂ ಯಾವುದೇ ಅಸ್ಥಿಪಂಜರ ಪತ್ತೆಯಾಗಲಿಲ್ಲ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಶೋಧ ಕಾರ್ಯದಲ್ಲಿ 20 ಕಾರ್ಮಿಕರು ಸೇರಿದಂತೆ 60 ಮಂದಿ ಭಾಗಿಯಾಗಿದ್ದರು.

ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಎಸ್‌ಐಟಿಯ ಎಸ್‌ ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ಅನಾಮಿಕ ಸಾಕ್ಷಿ ದೂರುದಾರ ಶೋಧ ಕಾರ್ಯದ ವೇಳೆ ಸ್ಥಳದಲ್ಲಿದ್ದರು.

ಸಾಕ್ಷಿ ದೂರುದಾರ ತೋರಿಸಿದ 5 ಜಾಗಗಳ ಪೈಕಿ ಎಂಟು ಕಡೆ ಅಗೆಯಲಾಗಿದೆ. ಇಂದು 9ನೇ ಸ್ಥಳವನ್ನು ಅಗೆಯಲಾಗುತ್ತಿದೆ.

More articles

Latest article