ಜಾರ್ಖಂಡ್‌ ನಲ್ಲಿ  ಗುಂಡಿನ ಚಕಮಕಿ: ಮೂವರು ನಕ್ಸಲರ ಎನ್‌ ಕೌಂಟರ್‌

Most read

ಜಾರ್ಖಂಡ್‌: ಜಾರ್ಖಂಡ್‌ ರಾಜ್ಯದ ಗುಮ್ಲಾ ಜಿಲ್ಲೆಯಲ್ಲಿ ನಡೆದ ಎನ್‌ ಕೌಂಟರ್‌ ನಲ್ಲಿ ಭದ್ರತಾ ಪಡೆಗಳು ಮೂವರು ನಕ್ಸಲರನ್ನು ಹತ್ಯೆ ಮಾಡಿವೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

ಸಿಪಿಐ(ಮಾವೋವಾದಿ) ಸಂಘಟನೆಯಿಂದ ಬೇರ್ಪಟ್ಟಿರುವ ಜಾರ್ಖಂಡ್ ಜನ್ ಮುಕ್ತಿ ಪರಿಷತ್‌ ನ (ಜೆಜೆಎಮ್ ಸದಸ್ಯರು) ಘಾಘ್ರ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದು, ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಗುಪ್ತಚರ ಮಾಹಿತಿ ಲಭ್ಯವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಭದ್ರತಾ ಪಡೆಗಳು ಹಾಗೂ ಗುಮ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಭದ್ರತಾ ಪಡೆಗಳು ಮತ್ತು ನಕ್ಸಲರ ಮಧ್ಯೆ ಗುಂಡಿನ ಚಕಮಕಿಯಾಗಿದೆ. ಈ ಸಂದರ್ಭದಲ್ಲಿ ಭದ್ರತಾ ಪಡೆಗಳು ಮೂವರು ನಕ್ಸಲರನ್ನು ಕೊಂದು ಹಾಕಿವೆ. ಈ ಸ್ಥಳದಲ್ಲಿ ಒಂದು ಎಕೆ-47 ಬಂದೂಕು ಹಾಗೂ ಎರಡು ಇತರೆ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

More articles

Latest article