ರೌಡಿ ಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣ: ಬಿಜೆಪಿ ಶಾಸಕ ಬೈರತಿ ಬಸವರಾಜ್  ಸಹೋದರನ ಪುತ್ರ ಬಂಧನ

Most read

ಬೆಂಗಳೂರು: ರೌಡಿ ಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ ಆರ್‌ ಪುರಂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ ಸಹೋದರನ ಪುತ್ರ ಅನಿಲ್‌ ಎಂಬಾತನನ್ನು ಬೆಂಗಳೂರಿನ ಭಾರತಿನಗರ ಠಾಣೆ ಪೊಲಿಸರು ವಶಕ್ಕೆ ಪಡೆದಿದ್ದಾರೆ. ಕೊಲೆ ಮಾಡಿದ ಆರೋಪಿಗಳಿಗೆ ಅನಿಲ್ ಕಾರು ನೀಡಿದ್ದ ಎಂದು ತಿಳಿದು ಬಂದಿದೆ. ಹೀಗಾಗಿ ಸದ್ಯ ಅನಿಲ್​ನನ್ನು ವಶಕ್ಕೆ ಪಡೆದಿರುವ ಬೆಂಗಳೂರಿನ ಭಾರತಿನಗರ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಈ ಹತ್ಯೆಗೆ ಸಂಬಂಧಿಸಿದಂತೆ ಜಗದೀಶ್, ಅರುಣ್, ನವೀನ್​ ಎಂಬ ಆರೋಪಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಶಾಸಕ ಭೈರತಿ ಬಸವರಾಜ್‌ ಐದನೇ ಆರೋಪಿಯಾಗಿದ್ದಾರೆ.

ಬಿಕ್ಲು ಶಿವನ ಕೊಲೆಗೆ ಕಿತ್ತಗನೂರಲ್ಲಿರುವ ಒಂದೂವರೆ ಎಕರೆ ಜಮೀನು ಕಾರಣವಾಗಿದೆ. ಈ ಜಮೀನಿಗೆ ಮೂವರು ಮಾಲೀಕರಿದ್ದು, ಈ ಪೈಕಿ ನದಾಫ್​ ಬಳಿ ಬಿಕ್ಲು ಜಮೀನು ಖರೀದಿ ಒಪ್ಪಂದ ಪತ್ರ ಮಾಡಿಸಿಕೊಂಡಿದ್ದ. ಮತ್ತೊಬ್ಬ ಮಾಲೀಕನಿಂದ ರವಿ ಒಪ್ಪಂದ ಮಾಡಿಸಿಕೊಂಡು ಕಾಂಪೌಂಡ್ ಹಾಕಿಸಿದ್ದ. ಇದನ್ನು ಸಹಿಸದ ಶಿವು ಕಾಂಪೌಂಡ್ ಕೆಡವಿ ಹಾಕಿದ್ದ. ಶಿವನನ್ನು ಮುಗಿಸಲು ಜಗದೀಶ್ ರೂಪಿಸಿದ್ದ. ಶಿವನ ಮಾಹಿತಿ ನೀಡಲು ಸ್ಯಾಮ್ಯುಯೆಲ್​ ಎಂಬಾತನನ್ನು  ನೇಮಿಸಿಕೊಂಡಿದ್ದ.. ಕೊಲೆ ದಿನ ಕೂಡ ಸ್ಯಾಮ್ಯುಯೆಲ್ ಕೊಟ್ಟ ಮಾಹಿತಿ ಆಧರಿಸಿ ಬಂದ ಆರೋಪಿಗಳು  ಬಿಕ್ಲು ಶಿವುನನ್ನ ಕೊಂದು ಪರಾರಿಯಾಗಿದ್ದರು.

ಅನಿಲ್‌ ಯಾರೆಂದು ಗೊತ್ತೇ ಇಲ್ಲ; ಭೈರತಿ ಸವರಾಜ್:

ಆದರೆ ರೌಡಿಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಪೋಲಿಸರು ಬಂಧಿಸಿರುವ ಅನಿಲ್ , ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಬೈರತಿ  ಬಸವರಾಜ್ ಸ್ಪಷ್ಟನೆ ನೀಡಿದ್ದಾರೆ.

ಪೋಲಿಸರಿಂದ ಬಂಧನಕ್ಕೊಳಗಾಗಿರುವ ಅನಿಲ್, ನನ್ನ ಸಹೋದರನ ಮಗನೆಂದು ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ. ಇದು ಸಂಪೂರ್ಣವಾಗಿ ಸತ್ಯಕ್ಕೆ ದೂರವಾದ ಮಾತು. ಆತ ಯಾರೆಂಬುದೇ ನಮಗೆ ತಿಳಿದಿಲ್ಲ. ಪ್ರಕರಣದಲ್ಲಿ ನಮ್ಮ ಸಹೋದರನ ಮಗ ಶಾಮೀಲಾಗಿದ್ದಾರೆ ಎಂದು ಅನಗತ್ಯವಾಗಿ ರಾಜಕೀಯ ದುರುದ್ದೇಶದಿಂದ ಕೆಲವರು ನನ್ನ ಚಾರಿತ್ರ್ಯವಧೆ  ಮಾಡಲು ಷಡ್ಯಂತ್ರ ನಡೆಸಿದ್ದಾರೆ. ನಾನು ಸಂಪೂರ್ಣವಾಗಿ ತನಿಖೆಗೆ ಸಹಕಾರ ಕೊಟ್ಟಿದ್ದೇನೆರಾಜಕೀಯ ಪ್ರೇರಿತ ಪ್ರಕರಣವನ್ನು ಹೇಗೆ ಎದುರಿಸಬೇಕೆಂಬುದು ನನಗೆ ಗೊತ್ತಿದೆ. ಇಂತಹ ಷಡ್ಯಂತ್ರಗಳನ್ನು ಎದುರಿಸಿಯೇ ನಾನು ಮೇಲಕ್ಕೆ ಬಂದಿದ್ದೇನೆ. ಇದಕ್ಕೆಲ್ಲಾ ಹೆದರುವ ಜಾಯಮಾನದವನಲ್ಲ. ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿದೆ. ಸೂಕ್ತ ಕಾಲದಲ್ಲಿ ಎಲ್ಲಾ ದಾಖಲೆಗಳೊಂದಿಗೆ ಮಾಧ್ಯಮಗಳ ಮುಂದೆ ಬರುತ್ತೇನೆ ಎಂದಿದ್ದಾರೆ.

More articles

Latest article