ಹಿಮಾಚಲ ಪ್ರದೇಶ: ಪ್ರವಾಹ ಪರಿಹಾರಕ್ಕೆ ಹಣ ಇಲ್ಲ ಎಂದ ಬಿಜೆಪಿ ಸಂಸದೆ ಕಂಗನಾ ರನೌತ್‌ ಹೇಳಿಕೆಗೆ ಆಕ್ರೋಶ

Most read

ಮಂಡಿ: ಪರಿಹಾರ ನೀಡಲು ತಮ್ಮ ಬಳಿ ಹಣವಿಲ್ಲ ಎಂಬ ಬಾಲಿವುಡ್‌ ನಟಿ, ಬಿಜೆಪಿ ಲೋಕಸಭಾ ಸದಸ್ಯೆ ಕಂಗನಾ ರನೌತ್‌ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಗನಾ ರನೌತ್‌ ಪರಿಹಾರ ನೀಡಲು ತಮ್ಮ ಬಳಿ ಹಣವಿಲ್ಲ ಎಂದು ಸಂದರ್ಶನವೊದರಲ್ಲಿ ಹೇಳಿಕೆ ನೀಡಿದ್ದರು.

ನಾನು ಯಾವುದೇ ಕ್ಯಾಬಿನೆಟ್‌ ಹುದ್ದೆಯನ್ನು ಹೊಂದಿಲ್ಲ. ಸಂಸದರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ. ಕೇಂದ್ರ ಯೋಜನೆಗಳನ್ನು ತರಲು ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಸಂಸತ್ತಿನ ಗಮನಕ್ಕೆ ತರುವುದಕ್ಕಷ್ಟೇ ನಾವು ಸೀಮಿತವಾಗಿದ್ದೇವೆ ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ಮಂಡಿ ನಾಗರೀಕರು ಮತ್ತು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು ಎಂಬುದನ್ನು ಮೊದಲು ಕಲಿಯುವಂತೆ ಕಾಂಗ್ರೆಸ್‌ ತಿರುಗೇಟು ನೀಡಿದೆ. ಜನರು ಸಂಕಷ್ಟದಲ್ಲಿರುವಾಗ ಅಪಹಾಸ್ಯ ಮಾಡುವುದು ಸೂಕ್ತವಾದ ನಡೆಯಲ್ಲ’ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್‌ ರಮೇಶ್ ಹೇಳಿದ್ದಾರೆ.

More articles

Latest article