ಬೆಂಗಳೂರು: ವೈಟ್‌ಫೀಲ್ಡ್(ಕಾಡುಗೋಡಿ) ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವಿನ ನೇರಳೆ ಮಾರ್ಗದಲ್ಲಿ ಇಂದು ಬೆಳಗ್ಗೆ ಮೆಟ್ರೋ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಬೆಳಗ್ಗೆ 5 ಗಂಟೆಗೆ ಆರಂಭವಾಗಬೇಕಿದ್ದ ವೈಟ್‌ಫೀಲ್ಡ್ ಮಾರ್ಗದ ಮೆಟ್ರೋ ರೈಲು ಸಂಚಾರ ತಾಂತ್ರಿಕ ದೋಷದಿಂದ ಸ್ಥಗಿತವಾಗಿತ್ತು. ಚಲ್ಲಘಟ್ಟ ಹೋಪ್ ಫಾರ್ಮ್ ಹಾಗೂ ಚನ್ನಸಂದ್ರ ನಡುವೆ ಮಾತ್ರ ರೈಲು ಸಂಚಾರ ಇರಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿತ್ತು.
ಇದೀಗ ಸಮಸ್ಯೆ ಬಗೆಹರಿದಿದ್ದು, ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟದವರೆಗೂ ಮೆಟ್ರೋ ಸಂಚಾರ 9.55 ರಿಂದ ಆರಂಭವಾಗಿದೆ.