ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ: ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಸಾವು; ಸಿಎಂ ತುರ್ತು ಸಭೆ

Most read

ಬೆಂಗಳೂರು: ಜಮ್ಮು ಕಾಶ್ಮೀರದಲ್ಲಿಮತ್ತೆ  ಉಗ್ರರು ಅಟ್ಟಹಾಸ ಮೆರೆದಿದ್ದಾರೆ.  ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ ಗಾಮ್ ನಲ್ಲಿ ಮಂಗಳವಾರ ಪ್ರವಾಸಿಗರ ಮೇಲೆ ನಡೆದಿದೆ. ಈ ಭಯೋತ್ಪಾದಕ ದಾಳಿಯಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಅವರು ಮೃತಪಟ್ಟಿದ್ದಾರೆ.

ಮಂಜುನಾಥ್ ಅವರು ಶಿವಮೊಗ್ಗದ ವಿಜಯನಗರದ ಮೂರನೇ ಕ್ರಾಸ್ ನಿವಾಸಿಯಾಗಿದ್ದಾಋ. ಪತ್ನಿ ಪಲ್ಲವಿ ಹಾಗೂ ಎಂಟು ವರ್ಷದ ಪುತ್ರನ ಜತೆ ಏ.19ರಂದು ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಪತ್ನಿ ಹಾಗೂ ಪುತ್ರ ಸುರಕ್ಷಿತವಾಗಿದ್ದಾರೆ. ಪಲ್ಲವಿ ಮ್ಯಾಮ್ಮೋಸ್ ಬೀರೂರು ಶಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಪ್ರತಿಕ್ರಿಯಿಸಿ  ನಾವು ಜಮ್ಮು-ಕಾಶ್ಮೀರದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಅಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ಮಂಜುನಾಥ ಅವರ ಪಾರ್ಥಿವ ಶರೀರ ಶಿವಮೊಗ್ಗಕ್ಕೆ ತರಲಿದ್ದೇವೆ ಎಂದರು.

ಪತ್ನಿ ಪಲ್ಲವಿ ಪ್ರತಿಕ್ರಿಯೆ ನೀಡಿದ್ದು. ಮಂಜುನಾಥ್‌ ಅವರು ಫುಡ್ ಆರ್ಡರ್ ಮಾಡಲು ಹೋಗಿದ್ದರು. ಗುಂಡಿನ ಸದ್ದು ಕೇಳಿ ಸೈನಿಕರ ತರಬೇತಿ ಎಂದು ಭಾವಿಸಿದ್ದೆ. ಹಿಂದೆ ತಿರುಗಿ ನೋಡುತ್ತಿದ್ದಂತೆ ಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಹೇಳಿದ್ದಾರೆ. ನೀನು ಯಾವ ಧರ್ಮಕ್ಕೆ ಸೇರಿದವನು? ನೀನು ಹಿಂದೂನಾ ಎಂದು ಪ್ರಶ್ನಿಸಿ ನನ್ನ ಪತಿ ಮೇಲೆ ದಾಳಿ ಮಾಡಿದ್ದಾರೆ. ನನ್ನ ಪತಿಯ ತಲೆಗೆ ಗುಂಡಿಟ್ಟು ಹೊಡೆದರು ಎಂದು ಹೇಳಿದ್ದಾರೆ.

ಸಿಎಂ ತುರ್ತು ಸಭೆ:

ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಕನ್ನಡಿಗ ಸಾವು ಪ್ರಕರಣ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ತುರ್ತು ಸಭೆ ನಡೆಯಿತು. ಸಬೆಯಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮತ್ತು , ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

ಕಾಶ್ಮೀರಕ್ಕೆ ಅಧಿಕಾರಿಗಳನ್ನು ಕಳುಹಿಸಲು ನಿರ್ಧಾರ ಮಾಡಲಾಗಿದೆ.  ಈ ಕ್ಷಣವೇ ತರಳಲಿದ್ದಾರೆ. ಪ್ರಕಣದ ಹೊಣೆಯನ್ನು ದೆಹಲಿ ಕರ್ನಾಟಕ ಭವನದ ಆಯುಕ್ತರಿಗೆ ವಹಿಸಲಾಗಿದೆ.  

More articles

Latest article