ದೇವದುರ್ಗ: ತಾಲೂಕಿನ ಅಮರಾಪುರ ಬಳಿಯ ಹಳ್ಯದ ತಡೆಗೋಡೆಗೆ ಬೆಲೆರೊ ಮ್ಯಾಕ್ಸ್ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಅಸು ನೀಗಿರುವ ಘಟನೆ ವರದಿಯಾಗಿದೆ. ಅಪಘಾತದಲ್ಲಿ ನಾಗರಾಜ್ (28), ಸೋಮು (38), ನಾಗಭೂಷಣ್ (36) ಹಾಗೂ ಮುರಳಿ (38) ಮೃತಪಟ್ಟಿದ್ದಾರೆ. ಚಾಲಕ ಆನಂದ ಗಂಭೀರವಾಗಿ ಗಾಯಗೊಂಡಿದ್ದು, ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ತೆಲಂಗಾಣದ ಹಿಂದೂಪುರ ನಿವಾಸಿಗಳು ಎಂದು ತಿಳಿದು ಬಂದಿದೆ. ದೇವದುರ್ಗ ತಾಲೂಕಿನ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರೆಲ್ಲರೂ ಶಹಪುರದಲ್ಲಿ ನಡೆಯುವ ಕುರಿ ಸಂತೆಗೆ ಕುರಿ ಖರೀದಿ ಮಾಡಲು ಹೊರಟಿದ್ದರು. ಚಾಲಕ ಆನಂದ ನಿದ್ದೆ ಆವರಿಸಿದ ಕಾರಣಕ್ಕೆ ಮತ್ತೊಬ್ಬರಿಗೆ ವಾಹನ ಓಡಿಸಲು ನೀಡಿದ್ದ. ಚಾಲಕನ ನಿಯಂತ್ರಣ ತಪ್ಪಿದ ವಾಹನ ಹಳ್ಯದ ಸೇತುವೆ ತಡೆಗೋಡೆಗೆ ಗುದ್ದಿದ್ದಾನೆ. ಸರಿಯಾಗಿ ವಾಹನ ಚಾಲನೆ ಮಾಡದ ಆತ ಈ ಅಫಘಾತಕ್ಕೆ ಕಾರಣವಾಗಿದ್ದಾನೆ.