5000 ಕೋಟಿ ರೂ. ತೆರಿಗೆ  ಸಂಗ್ರಹಿಸಿದ ಬಿಬಿಎಂಪಿ; ಶೇ 94.62 ರಷ್ಟು ಗುರಿ ಸಾಧನೆ

Most read

ಬೆಂಗಳೂರುಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( ಬಿಬಿಎಂಪಿ) ಪ್ರಸಕ್ತ ಸಾಲಿನಲ್ಲಿ ರೂ.4,930 ಕೋಟಿ ತೆರಿಗೆ ಸಂಗ್ರಹ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 1000 ಕೋಟಿ ರೂ.ಗಳಿಗೂ ಅಧಿಕ ತೆರಿಗೆ ಸಂಗ್ರಹಿಸಿ ದಾಖಲೆ ನಿರ್ಮಿಸಿದೆ.

ಎಂಟು ವಲಯಗಳ ಪೈಕಿ ಮಹದೇವಪುರ ಹಾಗೂ ಯಲಹಂಕ ವಲಯಗಳಲ್ಲಿ ಶೇ.ನೂರರಷ್ಟು ತೆರಿಗೆ ಸಂಗ್ರಹಿಸಲಾಗಿದೆ. ಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು 5 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನೀಡಿದ್ದರು.

2023-24ನೇ ಸಾಲಿನಲ್ಲಿ ಬಿಬಿಎಂಪಿ 3,918 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ ಮಾಡಿದ್ದ ಬಿಬಿಎಂಪಿ 2024-25 ರಲ್ಲಿ ರೂ. 4,930 ಕೋಟಿ ತೆರಿಗೆ ಸಂಗ್ರಹವಾಗಿದೆ.

ಬಿಬಿಎಂಪಿಯ ಎಂಟು ವಲಯಗಳ ಪೈಕಿ, ಯಲಹಂಕ ವಲಯ 445.24 ಕೋಟಿ ರೂ. ತೆರಿಗೆ ಸಂಗ್ರಹಿಸುವ ಗುರಿ ಹೊಂದಿದ್ದು,  464.66 ಕೋಟಿ ರೂ. ಸಂಗ್ರಹಿಸುವ ಮೂಲಕ ಶೇ 100.12 ರಷ್ಟು ಗುರಿ ಸಾಧಿಸಿದೆ. ರೂ. 1,310.58 ಕೋಟಿ ಸಂಗ್ರಹಿಸುವ ಮೂಲಕ ಮಹದೇವಪುರ ಎರಡನೇ ಸ್ಥಾನದಲ್ಲಿದೆ.

ದಕ್ಷಿಣ ವಲಯ 733.65 ಕೋಟಿ ರೂ. ಸಂಗ್ರಹಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದರೆ  ಪೂರ್ವ ವಲಯವು ಶೇ 93.52 ರಷ್ಡು ಗುರಿ ಸಾಧಿಸುವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ  ದಾಸರಹಳ್ಳಿ (ಶೇ 92.72), ಪಶ್ಚಿಮ ವಲಯ (ಶೇ 92.17), ರಾಜರಾಜೇಶ್ವರಿ ನಗರ ವಲಯ (ಶೇ. 87.89) ಇದೆ.  585.11 ಕೋಟಿ ರೂ. ಸಂಗ್ರಹಿಸುವ ಗುರಿಯಲ್ಲಿ ಶೇ 83.75 ರಷ್ಟು ತೆರಿಗೆ ಸಂಗ್ರಹಿಸುವ ಮೂಲಕ ಬೊಮ್ಮನಹಳ್ಳಿ ಕೊನೆಯ ಸ್ಥಾನದಲ್ಲಿದೆ. ಒಟ್ಟಾರೆ ಬಿಬಿಎಂಪಿ ಶೇ 94.62 ರಷ್ಟು ತೆರಿಗೆ ಸಂಗ್ರಹ ಮಾಡಿದೆ.

More articles

Latest article