ನೀರಿನ ದರ ಹೆಚ್ಚಳ, ಈ ತಿಂಗಳಿನಿಂದಲೇ ಜಾರಿ; ಎಷ್ಟು ಹೊರೆಯಾಗಬಹುದು?

Most read

ಬೆಂಗಳೂರು: ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ ಮಾಡಲಾಗಿದ್ದು, ಈ ತಿಂಗಳಿನಿಂದಲೇ ಜಾರಿಯಾಗಲಿದೆ.

ನೀರಿನ ದರ ಏರಿಕೆ ವಿವರ ಹೀಗಿದೆ

  • ಗೃಹಬಳಕೆಯ ನೀರಿಗೆ ಗರಿಷ್ಠ ಲೀಟರ್​ಗೆ 1 ಪೈಸೆ ಹೆಚ್ಚಳವಾಗಲಿದೆ.
  • 0-8 ಸಾವಿರ ಲೀಟರ್ ಸ್ಲ್ಯಾಬ್​‌ ಗೆ 15 ಪೈಸೆ ಹೆಚ್ಚಳವಾಗಲಿದೆ.
  • 8-25 ಸಾವಿರ ಲೀಟರ್ ಸ್ಲ್ಯಾಬ್​‌ ಗೆ 40 ಪೈಸೆ ಹೆಚ್ಚಳವಾಗಲಿದೆ.
  • 25 ಸಾವಿರ ಲೀಟರ್​ಗಿಂತ ಹೆಚ್ಚು ಬಳಕೆ ಮಾಡಿದರೆ 80 ಪೈಸೆ ಏರಿಕೆಯಾಗಲಿದೆ.
  • 50 ಸಾವಿರದಿಂದ 1 ಲಕ್ಷ ಲೀಟರ್ ನೀರು ಬಳಕೆಗೆ 1 ಪೈಸೆ ಹೆಚ್ಚಳವಾಗಲಿದೆ.

ಇನ್ನು ಮುಂದೆ ಪ್ರತಿ ವರ್ಷ ಏಪ್ರಿಲ್ 1ರಿಂದ ಶೇ. 3ರಷ್ಟು ನೀರಿನ ದರ ಹೆಚ್ಚಳವಾಗಲಿದೆ. ಇದರಿಂದ ಗೃಹ ಬಳಕೆದಾರರಿಗೆ ತಿಂಗಳಿಗೆ ರೂ. 20-30 ರೂ. ಹೆಚ್ಚುವರಿಯಾಗಿ ಹೊರೆಯಾಗಲಿದೆ. ವಾಣಿಜ್ಯ ಬಳಕೆದಾರರಿಗೆ ಪ್ರತಿ ತಿಂಗಳು 50-60 ರೂ. ಹೊರೆಯಾಗಬಹುದು ಎಂದು ಜಲಮಂಡಳಿ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ 2014 ರಿಂದೀಚೆಗೆ ನೀರು ಪೂರೈಕೆ ದರ ಹೆಚ್ಚಳ ಮಾಡಿಲ್ಲ. ಜಲ ಮಂಡಳಿ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಹೀಗಾಗಿ ಲೀಟರಿಗೆ ಒಂದು ಪೈಸೆಯನ್ನು ಹೆಚ್ಚಳ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇತ್ತೀಚೆಗೆ ಹೇಳಿದ್ದರು.

More articles

Latest article