ʼಮೇರೆ ದೇಶ್ ಕೀ ಧರ್ತಿ… ಸೋನಾ ಉಗಲೇʼ ಖ್ಯಾತಿಯ ದಾದಾಸಾಹೇಬ್ ಫಾಲ್ಕೆ ಪುರಸ್ಕೃತ ನಟ ಮನೋಜ್ ಕುಮಾರ್ ಇನ್ನಿಲ್ಲ

Most read

ಮೇರೆ ದೇಶ್ ಕಿ ಧರ್ತಿ… ಸೋನಾ ಉಗಲೇ ಖ್ಯಾತಿಯ ದಾದಾಸಾಹೇಬ್ ಫಾಲ್ಕೆ ಪುರಸ್ಕೃತ ಬಾಲಿವುಡ್‌ ನಟ ಮನೋಜ್ ಕುಮಾರ್ ಇನ್ನಿಲ್ಲ

ಮುಂಬೈ: ದಾದಾಸಾಹೇಬ್‌ ಫಾಲ್ಕೆ, ಪದ್ಮಶ್ರೀ ಪುರಸ್ಕೃತ ಖ್ಯಾತ ಬಾಲಿವುಡ್‌ನ ಹಿರಿಯ ನಟ, ನಿರ್ಮಾಪಕ ಮನೋಜ್‌ ಕುಮಾರ್‌‌ ಮುಂಬೈ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 87 ವರ್ಷವಾಗಿತ್ತು.

ಅವರ “ಉಪಕಾರ್”, ” ಪೂರಬ್ ಔರ್ ಪಶ್ಚಿಮ್”, “ಶೋರ್”,  “ರೋಟಿ, ಕಪಡಾ, ಮಕಾನ್”… ಸಿನಿಮಾಗಳು ನೆನಪಿನಿಂದ  ಮರೆಯಾಗಲು ಸಾಧ್ಯವೇ ಇಲ್ಲ. ದಿವಂಗತ ಪ್ರಧಾನಿ ಲಾಲಬಹಾದ್ದೂರ್ ಶಾಸ್ತ್ರಿ ರವರ ಆಶಯದ ಮೇರೆಗೆ ಮನೋಜ್ ಕುಮಾರ್ ನಿರ್ಮಿಸಿದ “ಉಪಕಾರ್”  ಸಿನಿಮಾದ “ಮೇರೆ ದೇಶ್ ಕಿ ಧರ್ತಿ… ಸೋನಾ ಉಗಲೇ” ಆ ಕಾಲದಲ್ಲಿ ಒಂದು ರೀತಿ ಎರಡನೇ ರಾಷ್ಟ್ರಗೀತೆಯಾಗಿಬಿಟ್ಟಿತ್ತು.  ಯುವಕರಲ್ಲಿ ದೇಶಪ್ರೇಮ ಹೆಚ್ಚು  ಮಾಡುವ ಸಿನಿಮಾಗಳನ್ನು ತೆಗೆದ ಖ್ಯಾತಿ ಶ್ರೀ ಮನೋಜ್ ಕುಮಾರ್ ಅವರದ್ದಾಗಿತ್ತು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಬೆಳಗಿನ ಜಾವ 3.30ರ ಸುಮಾರಿಗೆ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಅವರ ಕುಟುಂಬದ ಸ್ನೇಹಿತ ಮತ್ತು ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ವಾರಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಸಂತೋಷ್ ಶೆಟ್ಟಿ ತಿಳಿಸಿದ್ದಾರೆ.

ಹಿಂದಿ ಚಿತ್ರರಂಗದಲ್ಲಿ ಮನೋಜ್‌ ಕುಮಾರ್‌ ಅವರದ್ದು ಪ್ರಸಿದ್ಧ ಹೆಸರು. ಶಹೀದ್, ಉಪಕಾರ್, ಪುರಬ್ ಔರ್ ಪಶ್ಚಿಮ್ ಸೇರಿದಂತೆ ದೇಶಭಕ್ತಿಯ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದ ಅವರನ್ನು ಅಭಿಮಾನಿಗಳು ‘ಭರತ್ ಕುಮಾರ್’ ಎಂದು ಕರೆಯುತ್ತಿದ್ದರು. ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಅವರಿಗೆ 1992ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ, 2015ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

More articles

Latest article