ಬೆಂಗಳೂರಿನಲ್ಲಿ ಐಪಿಎಲ್ ಮ್ಯಾಚ್;‌  ಮೆಟ್ರೋ ರೈಲು ಸಂಚಾರ ವಿಸ್ತರಣೆ

Most read

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುವ ಎಲ್ಲಾ ಐಪಿಎಲ್ ಪಂದ್ಯಾವಳಿಗಳಿಗೆ ಮೆಟ್ರೋ ಸೇವೆ ವಿಸ್ತರಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಬೆಂಗಳೂರಿನಲ್ಲಿ ಒಟ್ಟು 7 ಪಂದ್ಯಗಳು ನಡೆಯಲಿವೆ.  ಪಂದ್ಯಗಳು ನಡೆಯುವ ಎಲ್ಲಾ ದಿನ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದ್ದು, ರಾತ್ರಿ 12:30ರವರೆಗೂ ವಿಸ್ತರಿಸಲಾಗಿದೆ ಎಂದು ಬಿ ಎಂ ಆರ್‌ ಸಿ ಎಲ್ ಮಾಹಿತಿ ನೀಡಿದೆ. ಏಪ್ರಿಲ್ 2‌ ರಂದು ಬೆಂಗಳೂರಿನಲ್ಲಿ ಐಪಿಎಲ್  ಪಂದ್ಯ ನಡೆಯಲಿದೆ.  

ಚಲ್ಲಘಟ್ಟ, ಮಾದಾವರ, ರೇಷ್ಮೆ ಸಂಸ್ಥೆ ಮತ್ತು ವೈಟ್‌ಫೀಲ್ಡ್ ಮಾರ್ಗಗಳಲ್ಲಿ ಮಧ್ಯ ರಾತ್ರಿ 12:30ರವರೆಗೂ ಮೆಟ್ರೋ ಸಂಚರಿಸಲಿದೆ. ಮೆಜೆಸ್ಟಿಕ್‌ನಿಂದ ಕೊನೆಯ ರೈಲು ನಾಲ್ಕು ಟರ್ಮಿನಲ್‌ಗಳಿಗೂ ಮಧ್ಯರಾತ್ರಿ 1:15ಕ್ಕೆ ಹೊರಡಲಿದೆ. ಏಪ್ರಿಲ್‌ .8, 10, .18, .24, ಮೇ 3, 13 ಮತ್ತು 17ರಂದು ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ. ನಾಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ಜಿಟಿ ತಂಡದ ನಡುವೆ ಮೊದಲ ಪಂದ್ಯ ನಡೆಯಲಿದೆ.

More articles

Latest article