ಚಿನ್ನ ಕಳ್ಳ ಸಾಗಣೆ: ರನ್ಯಾ ರಾವ್‌ ಕಂಪನಿಗಳ ಮಾಹಿತಿ ಸಂಗ್ರಹಿಸಲು ಮುಂದಾದ ಡಿಆರ್‌ಐ, ಇಡಿ

Most read

ಬೆಂಗಳೂರು: ನಟಿ ಹರ್ಷವರ್ಧಿನಿ ರನ್ಯಾ ರಾವ್ ಅವರು ನಡೆಸಿರುವ ವಹಿವಾಟುಗಳ ಬಗ್ಗೆ ರೆವಿನ್ಯೂ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಮತ್ತು ಜಾರಿ ನಿರ್ದೇಶನಾಲಯ (ಇ.ಡಿ) ಮಾಹಿತಿ ಸಂಗ್ರಹಿಸಲು ಮುಂದಾಗಿದೆ.

ರನ್ಯಾ ನಿರ್ದೇಶಕಿಯಾಗಿರುವ ಮೂರು ಕಂಪನಿಗಳನ್ನು ತನಿಖಾ ತಂಡ ಪತ್ತೆ ಮಾಡಿದೆ. ರನ್ಯಾ ರಾವ್ ಫೋಟೊಗ್ರಫಿ ಪ್ರೈವೇಟ್‌ ಲಿಮಿಟೆಡ್‌, ಐರಸ್‌ ಗ್ರೀನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಕ್ಸಿರೋಡಾ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.

ರನ್ಯಾ ಅವರ ತಾಯಿ ಪಿ.ಎಚ್‌.ರೋಹಿಣಿ ಅವರು ರನ್ಯಾ ರಾವ್ ಫೋಟೊಗ್ರಫಿ ಪ್ರೈವೇಟ್‌ ಲಿಮಿಟೆಡ್‌, ಐರಸ್‌ ಗ್ರೀನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಸಹೋದರ ಕೆ. ರಷಬ್ ಅವರು ಕ್ಸಿರೋಡಾ ಕಂಪನಿಗೆ ಸಹ ನಿರ್ದೇಶಕರಾಗಿದ್ದಾರೆ.

ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಈ ಮೂರು ಕಂಪನಿಗಳು ವಿಕ್ಟೋರಿಯಾ ಲೇಔಟ್‌ ವಿಳಾಸದಲ್ಲಿ ನೋಂದಣಿ ಆಗಿರುವುದು ತಿಳುದು ಬಂದಿದೆ. ಈ ಕಂಪನಿಗಳಿಗೆ ತಲಾ ರೂ.10 ಲಕ್ಷ ಬಂಡವಾಳ ಹೂಡಲಾಗಿದೆ. ಈ ಮೂರು ನಕಲಿ ಕಂಪನಿಗಳು ಎಂದು ಶಂಕಿಸಲಾಗಿದೆ. ಕಂಪನಿಗಳ ವರದಿಗಳು, ಬ್ಯಾಂಕ್ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಡಿಆರ್‌ಐ, ಇಡಿ ಮೂಲಗಳು ತಿಳಿಸಿವೆ.

More articles

Latest article