ಮಹಿಳೆ ಮೇಲೆ ಪಾನ್‌ ಉಗಿದಿದ್ದ ವ್ಯಕ್ತಿ ಬಂಧನ

Most read


ಬೆಂಗಳೂರು:  ತನ್ನ ಪಾಡಿಗೆ ತಾನು ನಡೆದುಕೊಂಡು ಮಹಿಳೆ ಹೋಗುತ್ತಿದ್ದ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಪಾನ್ ಮಸಲಾ ತಿಂದು ಉಗಿದು ನಂತರ ಪೊಲೀಸರ ಅತಿಥಿಯಾಗಿದ್ದಾನೆ. ಇದೀಗ ಇಂದಿರಾನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕೆಲವು ದಿನಗಳ ಹಿಂದೆ ಹರೀಶ್‌ ಎಂಬಾತ ದೊಮ್ಮಲೂರು ನಿವಾಸಿ ಅರ್ಚನಾ ಅವರನ್ನು ಹರೀಶ್ ಹಿಂಬಾಲಿಸಿಕೊಂಡು ಬಂದು ಪಾನ್ ಮಸಾಲಾ ಉಗಿದು ನಾಪತ್ತೆಯಾಗಿದ್ದ. ಈ ಸಂಬಂಧ ಅರ್ಚನಾ ಅವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಫೆಬ್ರವರಿ 25ರಂದು ಈ ಘಟನೆ ನಡೆದಿದ್ದು, ಮಾರ್ಚ್ 13 ರಂದು ಆರೋಪಿ ಹರೀಶ್ ನನ್ನು ಬಂಧಿಸಲಾಗಿದೆ.

ಫೆಬ್ರವರಿ 5ರ ರಾತ್ರಿ 9.30ರ ಸುಮಾರಿಗೆ ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ಕ್ ಬಳಿ ಅರ್ಚನಾ ಅವರು ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿದ್ದರು. ಆ ವೇಳೆ ಹರೀಶ್ ಅರ್ಚನಾ ಅವರನ್ನು ಹಿಂಬಾಲಿಸಿಕೊಂಡು ಬಂದ ಹರೀಶ್‌  ಪಾನ್ ಮಸಾಲಾ ಉಗಿದು ಓಡಿ ಹೋಗಿದ್ದ.  ನಂತರವೂ ಅದೇ ದಿನ  ರಾತ್ರಿ 11 ಗಂಟೆಗೆ ಮತ್ತೆ ಹರೀಶ್‌ ಅರ್ಚನಾ ಅವರ ಕಣ್ಣಿಗೆ ಬಿದ್ದಿದ್ದ. ಇದರಿಂದ ಭಯಗೊಂಡ ಅರ್ಚನಾ ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಅರ್ಚನಾ ಅವರು ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಪೊಲೀಸರು ಬಿಎನ್ಎಸ್ ಸೆಕ್ಷನ್ 78, 79ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಘಟನೆ ನಡೆದ ರಸ್ತೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದ ಪೊಲೀಸರು  ಹರೀಶ್ ನನ್ನು ಬಂಧಿಸಿದ್ದಾರೆ.
ತಿಪ್ಪಸಂದ್ರದ ನಿವಾಸಿಯಾಗಿರುವ ಹರೀಶ್‌ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆಕಸ್ಮಿಕವಾಗಿ ಪಾನ್‌ ಮಸಾಲಾ ಉಗಿದಿದ್ದಾಗಿ ತಿಳಿಸಿದ್ದಾನೆ.

More articles

Latest article