ಬೀದಿ ನಾಯಿ ನಾಪತ್ತೆ; ಹುಡುಕಿಕೊಡುವಂತೆ ಪೊಲೀಸರಿಗೆ ದೂರು

Most read


ಬೆಂಗಳೂರು: ಅಪಾರ್ಟ್‌ ಮೆಂಟ್‌ ಆವರಣದಲ್ಲಿದ್ದ ಗೋ ಗೋ ಎಂಬ ಬೀದಿ ನಾಯಿಯೊಂದು ಕಾಣೆಯಾಗಿದ್ದು ಹುಡುಕಿಕೊಡುವಂತೆ ಶ್ವಾನಪ್ರಿಯರೊಬ್ಬರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಕೋಡಿಚಿಕ್ಕನಹಳ್ಳಿ ಲೇಕ್‌ವ್ಯೂವ್ ರೆಸಿಡೆನ್ಸಿ ನಿವಾಸಿಯಾಗಿರುವ  ಪ್ರಾಣಿ ಪ್ರಿಯರೂ
ಆದ ನಿರ್ಮಲಾ ಅವರು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಮೈಕೊ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ನಾಯಿ ಹುಡುಕಾಟ ಆರಂಭಿಸಿದ್ದಾರೆ.

ಫೆಬ್ರುವರಿ 1ರ ತಡರಾತ್ರಿ 2 ಗಂಟೆಗೆ ರಂಕಾ ಕಾಲೊನಿ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ, ಅಪಾರ್ಟ್‌ ಮೆಂಟ್ ಪ್ರವೇಶ ದ್ವಾರದ ಹತ್ತಿರ ನಾಲ್ವರು ಅಪರಿಚಿತರು ಚೀಲದಲ್ಲಿ ಅಪರರಿಚಿತ ವಸ್ತುವನ್ನು ತುಂಬಿಕೊಂಡು ಹೋಗುತ್ತಿದ್ದರು.ನಂತರ  ಫೆಬ್ರುವರಿ 5ರಂದು ರಂಕಾ ಕಾಲೊನಿ ಅಪಾರ್ಟ್‌ಮೆಂಟ್ ನಿವಾಸಿ, ಸ್ನೇಹಿತ ಜಾಯ್ ದೀಪ್ ನನಗೆ ಮೊಬೈಲ್‌ ಕರೆ ಮಾಡಿ, ‘ಗೋ ಗೋ’ ಕಾಣೆಯಾಗಿರುವ ಮಾಹಿತಿ ನೀಡಿದ್ದರು. ಅಂದು ನಾನು ಕಾರಿನಲ್ಲಿ ಬರುವಾಗ ನಾಲ್ವರು ಅಪರಿಚಿತರು ಅಪಾರ್ಟ್‌ ಮೆಂಟ್ ಗೇಟ್ ಬಳಿ ಚೀಲದಲ್ಲಿ  ಏನನ್ನೋ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ನೆನಪಾಯಿತು ಎಂದು ನಿರ್ಮಾಲಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 ನಾಯಿ ಕಾಣೆಯಾದ ಸಮಯದ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಯನ್ನು ಪರಿಶೀಲಿಸುವಂತೆ ಜಾಯ್ ದೀಪ್‌ಗೆ ತಿಳಿಸಿದ್ದೆ. ಆತ ಆ ಸಮಯದ ದೃಶ್ಯಾವಳಿಗಳನ್ನು ಅಳಿಸಲಾಗಿದೆ ಎಂದು ತಿಳಿಸಿದ್ದರು. ಹಾಗಾಗಿ ನಾಯಿ ನಾಪತ್ತೆ ಹಿಂದೆ ರಂಕಾ ಕಾಲೊನಿ ಅಪಾರ್ಟ್‌ ಮೆಂಟ್ ನಿವಾಸಿಗಳ ಬಗ್ಗೆ ಅನುಮಾನವಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೂ ದೂರು ನೀಡಲಾಗಿದೆ. ನಾಯಿ ನಾಪತ್ತೆ ಬಗ್ಗೆ ಪ್ರಶ್ನೆ ಮಾಡಿದರೆ, ಅಪಾರ್ಟ್‌ಮೆಂಟ್ ನಿವಾಸಿಗಳ ಅಸೋಸಿಯೇಷನ್ ಸರಿಯಾದ ಉತ್ತರ ನೀಡುತ್ತಿಲ್ಲ. ಆದ್ದರಿಂದ ಮನಗೆ ನ್ಯಾಯ ಕೊಡಿಸಬೇಕು ಎಂದು ನಿರ್ಮಲಾ ಪೊಲೀಸರಲ್ಲಿ ಮನವಿ ಮಾಡಿ ಕೊಂಡಿದ್ದಾರೆ.

More articles

Latest article