ಬೆಂಗಳೂರು: ಬೀಗ ಹಾಕಿದ್ದ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ಓರ್ವ ಆರೋಪಿ ಮತ್ತು ಕಳ್ಳತನಕ್ಕೆ ಕುಮ್ಮಕ್ಕು ನೀಡುತ್ತಿದ್ದ ಮತ್ತೊಬ್ಬ ಆರೋಪಿಯನ್ನು ಅಮೃತಹಳ್ಳಿ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಾಚೇನಹಳ್ಳಿಯ ಅಪಾರ್ಟ್ ಮೆಂಟ್ ವೊಂದರ ನಿವಾಸಿ ಮನೆಗೆ ಬೀಗ ಹಾಕಿಕೊಂಡು ತಮ್ಮ ಸ್ವಂತ ಊರು ಬಿಹಾರಕ್ಕೆ ಹೋಗಿದ್ದಾಗ ಕಳ್ಳತನ ನಡೆದಿದೆ ಎಂದು ದೂರು ಸಲ್ಲಿಸಿದ್ದರು.
ತನಿಖೆ ಕೈಗೊಂಡ ಪೊಲೀಸರು ಬಲ್ಲ ಮೂಲಗಳಿಂದ ಖಚಿತವಾದ ಮಾಹಿತಿ ಆಧರಿಸಿ ಬಾಗಲೂರಿನ ರಜಾಕ್ ಪಾಳ್ಯದ ಮಸೀದಿ ಹತ್ತಿರ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈತನನ್ನು ವಿಚಾರಣೆಗೊಳಪಡಿಸಿದಾಗ, ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ. ಕಳವು ಮಾಡಲು ಪ್ರಚೋದಿಸಿದ ವ್ಯಕ್ತಿಯು ಕಳವು ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡಿ ಹಣವನ್ನು ನೀಡುವುದಾಗಿ ತಿಳಿಸಿದ ನಂತರ ಈ ಕೃತ್ಯ ಎಸಗಿದ್ದಾಗಿ ಮತ್ತು ಪ್ರಚೋದಿಸಿದ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ನೀಡಿರುತ್ತಾನೆ. ಆರೋಪಿಗಳಿಂದ 44 ಗ್ರಾಂ ಚಿನ್ನಾಭರಣ ಹಾಗ 700 ಗ್ರಾಂ ಬೆಳ್ಳಿಯ ವಸ್ತಗಳನ್ನು ವಶಪಡಿಸಿಕೊಳ್ಳಲಾಗಿದೆ.