ಎಟಿಎಂ ಭಸ್ಮ; ಸುಟ್ಟುಹೋದ ರೂ. 16 ಲಕ್ಷ ನಗದು

Most read

ಬಳ್ಳಾರಿ: ಶಾರ್ಟ್‌ ಸರ್ಕ್ಯೂಟ್‌ನಿಂದ ಎಸ್‍ಬಿಐ ಬ್ಯಾಂಕ್‍ನ ಎಟಿಎಂ ಹೊತ್ತಿ ಉರಿದ ಘಟನೆ ವಿಜಯನಗರ  ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ. ನಗರದ ಸರ್ಕಾರಿ ಕಾಲೇಜು ರಸ್ತೆಯ ಫರ್ವಾಜ್ ಪ್ಲಾಜಾದ ಸಮೀಪವಿರುವ ಎಟಿಎಂನಲ್ಲಿ  ಇಂದು ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ. ಎರಡು ಅಗ್ನಿಶಾಮಕ ವಾಹನದಲ್ಲಿ ಸಿಬ್ಬಂದಿಯಿಂದ ಬೆಂಕಿ ನಂದಿಸಲು ಪ್ರಯತ್ನ ನಡೆಸಿದ್ದು, ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಎಟಿಎಂ ಒಳಗೆ ಅಂದಾಜು 16 ಲಕ್ಷ ರೂ. ಹಣ ಇದ್ದು ಸುಟ್ಟು ಹೋಗಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಜೊತೆಗೆ ಎಟಿಎಂ ಮೌಲ್ಯ 40 ರಿಂದ 50 ಲಕ್ಷ ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಎಸ್‍ಬಿಐ ಬ್ಯಾಂಕ್ ಸಿಬ್ಬಂದಿ ಮತ್ತು ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

More articles

Latest article