ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ: ಹಾಲ್‌ ಟಿಕೆಟ್‌ ಪಡೆಯುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

Most read



ಬೆಂಗಳೂರು: ಮಾರ್ಚ್‌ 21 ರಿಂದ ನಡೆಯಲಿರುವ ಎಸ್‌ ಎಸ್‌ ಎಲ್‌ ಸಿ ಪರಿಕ್ಷೆಯೆ ಹಾಲ್‌ ಟಿಕೆಟ್‌ ಗಳನ್ನು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಾಂಕನ  ಮಂಡಳಿ ಶೀಘ್ರವೇ ವಿತರಿಸಲಿದೆ. ಪರೀಕ್ಷೆಗೆ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ ಸೈಟ್‌ kseab.karnataka.gov.in, ಅನ್ನು ಆಗಾಗ್ಗೆ ಗಮನಿಸುತ್ತಿದ್ದರೆ ಒಳ್ಳೆಯದು. ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಮಾರ್ಚ್‌ 21 ರಿಂದ ಆರಂಭವಾಗಲಿದ್ದು, ಮಾರ್ಚ್‌ 15 ರ ನಂತರ ಹಾಲ್‌ ಟಿಕೆಟ್‌ ಗಳನ್ನು ವಿತರಿಸಲಿದೆ.

ಹಾಲ್‌ ಟಿಕೆಟ್‌ ಇಲ್ಲದೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳನ್ನು ಪ್ರವೇಶಿಸುವಂತಿಲ್ಲ ಮತ್ತು ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ವೆಬ್‌ ಸೈಟ್‌ ಮೂಲಕ ವಿದ್ಯಾರ್ಥಿಗಳು ಹಾಲ್‌ ಟಿಕೆಟ್‌ ಗಳನ್ನು ಸುಲಭವಾಗಿ ಡೌನ್‌ ಲೋಡ್‌ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಆಯಾ ಶಾಲೆಗಳಲ್ಲಿಯೂ ಹಾಲ್‌ ಟಿಕೆಟ್‌ ಗಳನ್ನು ವಿತರಿಸಲಾಗುತ್ತದೆ.

ಹಾಲ್‌ ಟಿಕೆಟ್‌ ಡೌನ್‌ ಲೋಡ್‌ ಮಾಡಿಕೊಳ್ಳುವ ಕ್ರಮಗಳು:

ಮೊದಲ ಹಂತ: ಮಂಡಲೀಯ ಅಧಿಕೃತ ವೆಬ್‌ ಸೈಟ್‌ kseab.karnataka.gov.in, ಗೆ ಭೇಟಿ ಕೊಡಿ

ಎರಡನೇ ಹಂತ: admit card ಲಿಂಕ್‌ ಮೇಲೆ ಒತ್ತಿ.

ಮೂರನೇ ಹಂತ: ಮುಂದಿನ ಪುಟದಲ್ಲಿ SSLC Examination 2025 Hall Ticket ಲಿಂಕ್‌
ಆಯ್ಕೆ ಮಾಡಿಕೊಳ್ಳಿ.

ನಾಲ್ಕನೇ ಹಂತ: ನಂತರ ಲಾಗಿನ್‌ ಪೇಜ್‌ ಹೋಗಲು ಸೂಚನೆ ದೊರಕುತ್ತದೆ. ಅಲ್ಲಿ ನಿಮ್ಮ
ರಿಜಿಸ್ಟ್ರೇಷನ್‌ ಸಂಖ್ಯೆ ಮತ್ತು ಪಾಸ್‌ ವರ್ಡ್‌ ನಮೂದಿಸಿ.

ಐದನೇ ಹಂತ: ಅಂತಿಮವಾಗಿ submit ಬಟನ್‌ ಒತ್ತಿ ನಿಮ್ಮ ಹಾಲ್‌ ಟಿಕೆಟ್‌ ಅನ್ನು ಡೌನ್‌
ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಮಾರ್ಚ್‌ 21 ರಿಂದ ಏಪ್ರಿಲ್‌ 4 ರವರೆಗೆ ನಡೆಯಲಿದೆ. ಬಹುತೇಕ ವಿಷಯಗಳಿಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1.15ರವರೆಗೆ ಪರೀಕ್ಷೆ ನಡೆಯಲಿದೆ. ಹಿಂದೂಸ್ತಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ವಿಷಯಗಳಿಗೆ ಮಾತ್ರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15 ರವರೆಗೆ ಪರೀಕ್ಷೆ ನಡೆಯಲಿದೆ. ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಗೆ ಒಟ್ಟು 8,96,447 ವಿದ್ಯಾರ್ಥಿಗಳು ಹಾಜರಾಗಲಿದ್ದು, ಇವರಲ್ಲಿ 4,61,563 ಬಾಲಕರು ಮತ್ತು 4,34.884 ಬಾಲಕಿಯರಿದ್ದಾರೆ ಎಂದು ಪರೀಕ್ಷಾ ಮಂಡಳಿ ತಿಳಿಸಿದೆ.
ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶವಾಗದಂತೆ ಪ್ರತಿ ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್‌ ಪ್ರದೇಶವನ್ನು ನಿರ್ಬಂಧಿತ ವಲಯ ಎಂದು ಘೋಷಿಸಲಾಗುತ್ತದೆ. ಜೆರಾಕ್ಸ್‌, ಸೈಬರ್‌ ಸೆಂಟರ್‌, ಕಂಪ್ಯೂಟರ್‌ ಕೇಂದ್ರಗಳನ್ನು ಪರೀಕ್ಷಾ ದಿನದಂದು ಮುಚ್ಚಿಸಲಾಗುತ್ತದೆ.
ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವ ಯಾರೇ ಆದರೂ ಶಿಕ್ಷಣ ಕಾಯಿದೆ ಅಡಿಯಲ್ಲಿ ಕಠಿಣ ನಿಯಮ ಕೈಗೊಳ್ಳಲು ಮಂಡಳಿ ನಿರ್ಧರಿಸಿದೆ ಮತ್ತು ಭದ್ರತೆಗಾಗಿ ಅಗತ್ಯ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲು ತೀರ್ಮಾನಿಸಿದೆ.
ಈ ವರ್ಷ ವಿಳಂಬ ಮಾಡದೆ ಪರೀಕ್ಷೆ ಮುಗಿಯುತ್ತಿದ್ದಂತೆ ಮೌಲ್ಯಮಾಪನ ಆರಂಭಿಸಲು ನಿರ್ಧರಿಸಲಾಗಿದೆ. ಕಳೆದ ವರ್ಷದಂತೆಯೇ ಈ ವರ್ಷವೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಮೌಲ್ಯಮಾಪನ ಕೇಂದ್ರಗಳಲ್ಲಿ ವೆಬ್‌ ಕಾಸ್ಟಿಂಗ್‌ ಜಾರಿಗೊಳಿಸಲಾಗಿದೆ.

More articles

Latest article