ಪುರುಷ ಪ್ರಯಾಣಿಕರ ಸೀಟುಗಳು ಪುರುಷರಿಗೆ ಮೀಸಲು!

Most read

ಮೈಸೂರು: ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಮೀಸಲಿಟ್ಟ ಆಸನಗಳನ್ನು ಬಿಟ್ಟು ಕೊಡಿ….. ಮೀಸಲಿಟ್ಟ ಆಸನದಲ್ಲಿ ಕುಳಿತುಕೊಂಡರೆ ದಂಡ ವಿಧಿಸಲಾಗುವುದು….. ಸರ್ಕಾರಿ ಬಸ್‌ ಹತ್ತಿದರೆ ಮೊದಲು ಕಣ್ಣಿಗೆ ಗೋಚರಿಸುವುದೇ ಇಂತಹ ಸಂದೇಶಗಳು. ಆದರೆ ಈದೀಗ ಪುರುಷರಿಗೂ ಕಾಲ ಬಂದಿದೆ. ಪುರುಷ ಪ್ರಯಾಣಿಕರ ಸೀಟುಗಳಲ್ಲಿ ಪುರುಷರೇ ಕುಳಿತುಕೊಳ್ಳಬೇಕು ಎಂದು ಕೆಎಸ್‌ಆರ್‌ಟಿಸಿ ಮೈಸೂರು ನಗರ ವಿಭಾಗ ಆದೇಶ ಹೊರಡಿಸಿದೆ.

ಶಕ್ತಿ ಯೋಜನೆ ಜಾರಿಗ ಬಂದ ನಂತರ ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಪುರುಷ ಪ್ರಯಾಣಿಕರಿಗೆ ಸೀಟು ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದ್ದವು.  ಮೈಸೂರು ನಗರ ಸಾರಿಗೆ ವಾಹನಗಳಲ್ಲಿ ಪುರುಷ ಪ್ರಯಾಣಿಕರಿಗೆ ಮೀಸಲಿರುವ ಆಸನಗಳನ್ನು ಅವರಿಗೆ ಬಿಟ್ಟುಕೊಡಬೇಕು ಎಂದು ಪುರುಷರು ಮನವಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಮೈಸೂರು ಘಟಕದಿಂದ ಕಾರ್ಯಾಚರಣೆಯಾಗುವ ಎಲ್ಲಾ ಬಸ್‌ ಗಳಲ್ಲಿ ಪುರುಷ ಪ್ರಯಾಣಿಕರಿಗೆ ಮೀಸಲಿರುವ ಆಸನಗಳನ್ನು ಬಿಟ್ಟುಕೊಡುವಂತೆ ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಚಾಲಕರು ಹಾಗೂ ಸಿಬ್ಬಂದಿಗೆ ಆದೇಶ ಹೊರಡಿಸಿದೆ.

More articles

Latest article