ಅನ್ನಭಾಗ್ಯ ಯೋಜನೆ: ಇನ್ನು ಮುಂದೆ ಹಣಕ್ಕೆ ಬದಲಾಗಿ 5 ಕೆಜಿ ಅಕ್ಕಿ ವಿತರಣೆ

Most read

ಬೆಂಗಳೂರು: 2023ರ ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಅನ್ನಭಾಗ್ಯವೂ ಒಂದು. ಈ ಯೋಜನೆಯಡಿಯಲ್ಲಿ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಕೇಂದ್ರ ಸರಕಾರ ಮೊದಲು ಒಪ್ಪಿ ನಂತರ ಅಕ್ಕಿ ನೀಡಲು ತಕರಾರು ತಗೆದಿತ್ತು. ಆದ್ದರಿಂದ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಮತ್ತು ಉಳಿದ ಐದು ಕೆಜಿ ಅಕ್ಕಿಗೆ ಬದಲಾಗಿ170 ರೂ. ನಗದನ್ನು ಬ್ಯಾಂಖ್ ಖಾತೆಗೆ ಜಮಾ ಮಾಡುತ್ತಿತ್ತು.

ಇದೀಗ ಕೇಂದ್ರ ಸರ್ಕಾರ ಅಕ್ಕಿಯನ್ನು ನೀಡಲು ಒಪ್ಪಿದೆ. ಒಎಂಎಸ್‌ಎಸ್‌  ಯೋಜನೆ ಅಡಿಯಲ್ಲಿ ಖರೀದಿಸಿ ಈ ತಿಂಗಳಿನಿಂದಲೇ ಅಕ್ಕಿ ವಿತರಿಸಲು ತೀರ್ಮಾನಿಸಿದೆ.‌ ಇನ್ನು ಮುಂದೆ ಹಣಕ್ಕೆ ಫೆಬ್ರವರಿ ತಿಂಗಳಿನಿಂದಲೇ ಅಕ್ಕಿ ವಿತರಿಸುವುದಾಗಿ  ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್.‌ ಮುನಿಯಪ್ಪ ತಿಳಿಸಿದ್ದಾರೆ.

More articles

Latest article