ಪೀಣ್ಯ ಮೇಲ್ಸೇತುವೆ; ಒಂದೂವರೆ ವರ್ಷ ಭಾರಿ ವಾಹನಗಳಿಗಿಲ್ಲ ಅವಕಾಶ

Most read

ಬೆಂಗಳೂರು: ಉತ್ತರ ಕರ್ನಾಟಕ ಮತ್ತು ಉತ್ತರ ಭಾರತವನ್ನು ಸಂಪರ್ಕಿಸಲು ಬೆಂಗಳೂರಿನಿಂದ ಹೊರಡುವ ವಾಹನಗಳಿಗೆ ಪೀಣ್ಯ ಮೇಲ್ಸೇತುವೆ ಒಂದು ರೀತಿಯಲ್ಲಿ ಹೆಬ್ಬಾಗಿಲು ಇದ್ದಂತೆ. ಆದರೆ ಆಗೊಮ್ಮೆ ಈಗೊಮ್ಮೆ  ಈ ಪೀಣ್ಯ ಮೇಲ್ಸೇತುವೆ ಮೇಲೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುತ್ತಾ ಬರಲಾಗಿದೆ. ಆದರೆ ಬಾರಿ ವಾಹನಗಳ ಪಾಲಿಗೆ ಬಂದ್‌ ಆಗಿದೆ. ವಾರದಲ್ಲಿ ಶುಕ್ರವಾರ ಹಾಗೂ ಶನಿವಾರ ಬಾರೀ ವಾಹನಗಳಿಗೆ ನಿರ್ಬಂಧ ಹೇರಲಾಗಿತ್ತು. ಶೀಘ್ರದಲ್ಲೇ ಈ ನಿರ್ಬಂಧ ತೆರವಾಗುತ್ತದೆ ಎಂದು ಕಾಯುತ್ತಿದ್ದ ವಾಹನ ಸವಾರರಿಗೆ ಬೆಂಗಳೂರು ಸಂಚಾರಿ ಪೊಲೀಸರು ಮತ್ತೆ ಶಾಕ್ ನೀಡಿದ್ದಾರೆ. ಬಾರೀ ವಾಹನಗಳಿಗೆ ನಿರ್ಬಂಧವನ್ನು ಇನ್ನೂ ಒಂದೂವರೆ ವರ್ಷ ಮುಂದುವರೆಸಲು ನಿರ್ಧರಿಸಿದ್ದಾರೆ.

ಪೀಣ್ಯ ಫ್ಲೈ ಓವರ್ ನಲ್ಲಿ ಎಲ್ಲಾ ಪಿಲ್ಲರ್ ಗಳ ಮಧ್ಯೆ ತಲಾ ಎರಡರಂತೆ 240 ಕೇಬಲ್ ಗಳನ್ನ ಅಳವಡಿಸಲಾಗಿತ್ತು, ಎರಡನೇ ಹಂತದಲ್ಲಿ ಎರಡು ಪಿಲ್ಲರ್ ಮಧ್ಯೆ ತಲಾ 10 ರಂತೆ 1200 ಕೇಬಲ್ ಗಳನ್ನು ಬದಲಾಯಿಸಲಾಗಿದ್ದು, ಈಗಾಗಲೇ 300 ಕೇಬಲ್ ಅಳವಡಿಸಲಾಗಿದೆ. ಆದರೆ ಇದೀಗ ಬಾಕಿ ಕೇಬಲ್ ಗಳ ಅಳವಡಿಕೆಗೆ ಇನ್ನೂ ಒಂದೂವರೆ ವರ್ಷದ ಸಮಯಾವಕಾಶ  ಬೇಕಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಕೇಬಲ್ ಅಳವಡಿಕೆ ನಂತರವ ಭಾರತೀಯ ವಿಜ್ಞಾನ ಸಂಸ್ಥೆ (IISC) ತಜ್ಞರು ಪರಿಶೀಲಿಸಿ ವರದಿ ನೀಡಿದರಷ್ಟೇ ಬಾರೀ ವಾಹನ ಸಂಚಾರಕ್ಕೆ ಅವಕಾಶ ಸಿಗಲಿದೆ.

More articles

Latest article