ನಾಳೆ ಬೆಂಗಳೂರಿಗೆ ಮರಳುತ್ತಿರುವ ಶಿವರಾಜಕುಮಾರ್‌

Most read

ಬೆಂಗಳೂರು: ಶಸ್ತ್ರಚಿಕಿತ್ಸೆ ಬಳಿಕ ಅಮೆರಿಕದಲ್ಲಿ ವಿಶ್ರಾಂತಿ ಪಡೆಯುತ್ತಿರುವ ನಟ ಶಿವರಾಜ್‌ಕುಮಾರ್‌ ನಾಳೆ ಬೆಂಗಳೂರಿಗೆ ಮರಳುತ್ತಿದ್ದಾರೆ.ಈ ಸಿಹಿಸುದ್ದಿಯನ್ನುಅವರೇ ಹಂಚಿಕೊಂಡಿದ್ದಾರೆ. ನಾಳೆ, ಜ.26 ರ ಗಣರಾಜ್ಯೋತ್ಸವದಂದು ಬೆಂಗಳೂರಿಗೆ ವಾಪಸ್‌ ಆಗುತ್ತಿರುವುದಾಗಿ ವೀಡಿಯೋ  ಸಂದೇಶದ ಮೂಲಕ ಶಿವಣ್ಣ ತಿಳಿಸಿದ್ದಾರೆ. ನಿಮ್ಮೆಲ್ಲರ ಪ್ರೀತಿ ಹಾರೈಕೆಗೆ ಚಿರಋಣಿ ಎಂದು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 

ಹಾಯ್‌.. ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಪ್ರೀತಿಯ ಶಿವರಾಜ್‌ಕುಮಾರ್.‌ ನಿಮ್ಮ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ಚಿರಋಣಿ. ನಿಮ್ಮೆಲ್ಲರನ್ನೂ ನೋಡುವುದಕ್ಕೆ ನಾನು ಜ.26 ರ ಗಣರಾಜ್ಯೋತ್ಸವದಂದು ಬೆಂಗಳೂರಿಗೆ ಬರುತ್ತಿದ್ದೇನೆ’ ಎಂದು ಅಭಿಮಾನಿಗಳಿಗೆ ನಟ ಶಿವರಾಜ್‌ಕುಮಾರ್‌ ಹೇಳಿದ್ದಾರೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶಿವರಾಜ್‌ಕುಮಾರ್‌ ಅವರು ಇತ್ತೀಚೆಗೆ ಅಮೆರಿಕಾಗೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲಿನ ಮಿಯಾಮಿ ಕ್ಯಾನ್ಸರ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಶಸ್ತ್ರಚಿಕಿತ್ಸೆ ನಡೆದಿತ್ತು. ಬಳಿಕ ಕೆಲವು ದಿನಗಳ ಕಾಲ ಅಲ್ಲೇ ಉಳಿದು ವಿಶ್ರಾಂತಿ ಪಡೆದಿದ್ದರು. ಈ ಸಂದರ್ಭದಲ್ಲಿ ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್‌ ಜತೆಗಿದ್ದರು. ಅಮೆರಿಕದಲ್ಲಿರುವ ಸ್ನೇಹಿತರು, ಆಪ್ತರು, ಅಭಿಮಾನಿಗಳ ಜೊತೆ ಶಿವಣ್ಣ ಎಂಜಾಯ್‌ ಮಾಡಿದ್ದರು.  ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಬೆಂಗಳೂರಿಗೆ ಮರಳುತ್ತಿದ್ದಾರೆ.

More articles

Latest article