ಛತ್ತೀಸ್ಗಡ : ಮಹಿಳಾ ಸಬಲೀಕರಣದ ಉದ್ದೇಶಕ್ಕಾಗಿ ಛತ್ತೀಸ್ಗಡ ಸರ್ಕಾರ ಜಾರಿಗೊಳಿಸಿರುವ “ಮಹತಾರಿ ವಂದನ್ ಯೋಜನೆ”ಯ ಅಡಿಯಲ್ಲಿ ಹಾಲಿವುಡ್ ನಟಿ ಸನ್ನಿ ಲಿಯೋನ್ ಅವರೂ ಫಲಾನುಭವಿಯಾಗಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಕಳೆದ 10 ತಿಂಗಳಿನಿಂದ ಸನ್ನಿ ಲಿಯೋನ್ ಖಾತೆಗೆ ಹಣ ವರ್ಗಾವಣೆಯಾಗುತ್ತಿದೆ. ಆದರೆ ಇದು ನಕಲಿ ಖಾತೆ. ಆರೋಪಿಯೊಬ್ಬ ಸನ್ನಿ ಲಿಯೋನ್ ತನ್ನ ಪತ್ನಿ ಎಂದು ದಾಲೆ ಸೃಷ್ಟಿಸಿ ಹಣ ಪಡೆದುಕೊಳ್ಳುತ್ತಿದ್ದ.
ಅರ್ಹ ವಿವಾಹಿತ ಮಹಿಳೆಯರಿಗೆ ಪ್ರತಿ ತಿಂಗಳು ರೂ. 1000 ದೊರಕುವ ಈ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿತ್ತು.
ದಾಖಲೆಯಲ್ಲಿ ಜಾನಿ ಸಿನ್ಸ್ ಅವರ ಪತ್ನಿ ಫಲಾನುಭವಿ ಸನ್ನಿ ಲಿಯೋನ್ ಎಂದು ಇವರ ಹೆಸರಿದೆ. ಈ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಆರೋಪಿ ವೀರೇಂದ್ರ ಕುಮಾರ್ ಜೋಶಿ ಯನ್ನು ಪತ್ತೆಹಚ್ಚಿ ಎಫ್ ಐ ಆರ್ ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಕ್ರಿಯಿಸಿರುವ ಬಸ್ತಾರ್ ಜಿಲ್ಲಾಧಿಕಾರಿ ಹ್ಯಾರಿಸ್ ಎಸ್. ಅವರು, ಇದು ನಿಜವಾಗಿಯೂ ಮುಜುಗರದ ಸಂಗತಿ. ತಾಳೂರು ಗ್ರಾಮದ ಜೋಶಿ ಎಂಬಾತ ತಪ್ಪು ಹೆಸರು ಮತ್ತು ದಾಖಲೆಗಳನ್ನು ನೀಡಿ ಪ್ರತಿ ತಿಂಗಳು ರೂ.1000 ಪಡೆಯುತ್ತಿದ್ದ. ಈಗ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದು, ಆರೋಪಿಯಿಂದ ಹಣವನ್ನು ಮರಳಿ ಪಡೆಯಲು ಕ್ರಮ ಜರುಗಿಸುತ್ತೇವೆ. ಪೊಲೀಸರು ಎಫ್ಐಆರ್ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಈ ಲೋಪ ಎಸಗಿದ ಅಂಗನವಾಡಿ ಕಾರ್ಯಕರ್ತೆ ಮತ್ತು ಮೇಲ್ವಿಚಾರಕರ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುತ್ತದೆ. ಫಲಾನುಭವಿಗಳ ಗುರುತು ಮತ್ತು ಸರಿಯಾದ ಫಲಾನುಭವಿಯನ್ನು ಗುರುತಿಸುವ ಕೆಲಸವನ್ನು ಇವರು ನಿರ್ಲಕ್ಷಿಸಿದ್ದಾರೆ ಎಂದೂ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ವಂಚಕ ಜೋಶಿ ತಳೂರು ಗ್ರಾಮದ ನಿವಾಸಿಯಾಗಿದ್ದು, ಜಗದಲ್‌ಪುರ ಪಟ್ಟಣದಲ್ಲಿರುವ ಶ್ರೀರಾಮ್ ಫೈನಾನ್ಸ್ ನಲ್ಲಿ ಉದ್ಯೋಗಿ ಎಂದು ತಲೀದು ಬಂದಿದೆ.