ಕುಖ್ಯಾತ ಪದವೀಧರ ಮನೆಗಳ್ಳನ ಬಂಧನ; 1.36 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ

Most read

ಬೆಂಗಳೂರು: ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದಉತ್ತರಪ್ರದೇಶ ಮೂಲದ ಕುಖ್ಯಾತ ದೃೋಡೆಕೋರನೊಬ್ಬನನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು  ಬಂಧಿಸಿದ್ದು, 1.36 ಕೋಟಿ ರೂ. ಮೌಲ್ಯದ 1 ಕೆಜಿ 700 ಗ್ರಾಂ ಚಿನ್ನಾಭರಣಗಳನ್ನುವಶಪಡಿಸಿಕೊಂಡಿದ್ದಾರೆ. ಮುರ್ದಾಬಾದ್ ಜಿಲ್ಲೆಯ ಫಯೀಮ್ ಅಲಿಯಾಸ್ ಎಟಿಎಂ(38) ಬಂಧಿತ ಆರೋಪಿ. ಈತ ಮೂರು ವಿಷಯಗಳಲ್ಲಿ ಪದವೀಧರನಾಗಿದ್ದಾನೆ. ಯಾಗಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅನ್ನಪೂರ್ಣೇಶ್ವರಿ ನಗರದ ಆರೋಗ್ಯ ಬಡಾವಣೆಯ ಪ್ರಸನ್ನ ಕುಮಾರ್ ಅವರು ಕುಟುಂಬ ಸಮೇತ ಕಳೆದ ಆ.19 ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿರುತ್ತಾರೆ. ಮತ್ತೆ ಸಂಜೆ ಹಿಂತಿರುಗಿ ಬರುವ ವೇಳೆಗೆ ಮುಂಬಾಗಿಲಿನ ಡೋರ್ ಲಾಕ್ ಮುರಿದು ಒಳನುಗ್ಗಿ ಕೊಠಡಿಯೊಂದರ ಬೀರುವಿನಲ್ಲಿದ್ದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳು ಕಳುವಾಗಿರುತ್ತವೆ.

ಪ್ರಸನ್ನ ಕುಮಾರ್ ನೀಡಿದ ದೂರು ಆಧರಿಸಿ ಅನ್ನಪೂರ್ಣೇಶ್ವರಿನಗರ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡರೂ ಆರೋಪಿಯ ಸುಳಿವು ದೊರೆತಿರುವುದಿಲ್ಲ. ಆದರೂ ಪಟ್ಟು ಬಿಡದ ಪೊಲೀಸರು ತನಿಖೆಯನ್ನು ಮುಂದುವರೆಸಿ ಖಚಿತವಾದ ಮಾಹಿತಿಯನ್ನು ಆಧರಿಸಿ ನ.9 ರಂದು ಉತ್ತರ ಪ್ರದೇಶದ ಮುರಾದಾಬಾದ್‌ನ ಜಿಲ್ಲಾ ಕಾರಾಗೃಹದಿಂದ ಬಾಡಿ ವಾರೆಂಟ್ ಮೇಲೆ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಲೂತ್ತಾರೆ. ಅತನನ್ನು ಹೆಚ್ಚಿನ ವಿಚಾರಣೆಗೆ ಗುರಿಪಡಿಸಿದಾಗ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಳ್ಳುತ್ತಾನೆ. ಇದೇ ರೀತಿ ಬೆಂಗಳೂರಿನ  ವಿವಿಧ ಕಡೆಗಳಲ್ಲಿಯೂ ಈತ  ಕಳವು ಮಾಡಿರುತ್ತಾನೆ.

ಈತ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಉತ್ತರ ಪ್ರದೇಶದ ವಿವಿಧ ಗಿರವಿ ಅಂಗಡಿಗಳಲ್ಲಿ ಮಾರಾಟ ಮಾಡಿರುತ್ತಾನೆ. ಈತ ಮಾರಾಟ ಮಾಡಿದ್ದ ಚಿನ್ನಾಭರಣ ಅಂಗಡಿಗಳಿಂದ ಚಿನ್ನವನ್ನು  ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಈತನ ಬಂಧನದಿಂದ ಅನ್ನಪೂರ್ಣೇಶ್ವರಿ ನಗರ. ಕೆಂಗೇರಿ, ಜ್ಞಾನಭಾರತಿ, ಆರ್.ಎಂ.ಸಿ. ಯಾರ್ಡ್, ಪೀಣ್ಯ, ಬಾಣಾಸವಾಡಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಹಲವಾರು ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.

More articles

Latest article