ಆನ್ ಲೈನ್ ನಲ್ಲಿ ಹಣ ಪಾವತಿಯಾಗಿದೆ ಎಂದು ನಂಬಿಸಿ ವಂಚಿಸಿದ್ದ ಯುವತಿ ಬಂಧನ

Most read

ಬೆಂಗಳೂರು: ಬಟ್ಟೆ ಅಂಗಡಿಯಲ್ಲಿ 32 ಸಾವಿರ ರೂ ಬೆಲೆ ಬಾಳುವ ಉಡುಪುಗಳನ್ನು ಖರೀದಿಸಿ ಆನ್ ಲೈನ್ ಮೂಲಕ ಹಣ ಪಾವತಿಯಾಗಿದೆ ಎಂದು ನಕಲಿ ಫೊಟೋ ತೋರಿಸಿದ್ದ ಯುವತಿಯನ್ನು ಸದಾಶಿವನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರದ ನಿವಾಸಿ 25 ವರ್ಷದ ರಶ್ಮಿ ಬಂಧಿತ ಆರೋಪಿ. ಈಕೆ ಸದಾಶಿವನಗರದ ಆರ್ಎಂವಿ ಬಡಾವಣೆಯ ವಸಿಷ್ಠ ಬೂಟಿಕ್ ನಲ್ಲಿ ಅಂಗಡಿಯಲ್ಲಿ 31,800 ಮೌಲ್ಯದ ಬಟ್ಟೆ ಖರೀದಿಸಿ ವಂಚಿಸಿದ್ದರು. ಬೂಟಿಕ್ ಮಾಲೀಕರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ವಿಮಾ ಕಂಪನಿಯೊಂದರಲ್ಲಿ ರಶ್ಮಿ ಉದ್ಯೋಗಿಯಾಗಿದ್ದ ರಶ್ಮಿ ಲೆಕ್ಕ ಪರಿಶೋಧಕ (ಸಿ.ಎ) ಪರೀಕ್ಷೆ ತೆಗೆದುಕೊಂಡಿದ್ದರು.
ಅಕ್ಟೋಬರ್ 29ರಂದು ಮಧ್ಯಾಹ್ನ 1ಗಂಟೆಯ ವೇಳೆಗೆ ಬೂಟಿಕ್ ಗೆ ಆಗಮಿಸಿದ್ದ ರಶ್ಮಿ ಬಟ್ಟೆ ಖರೀದಿಸಿದ್ದರು. ಸ್ನೇಹಾ ಹೆಸರಿನಲ್ಲಿ ಬಿಲ್ ಮಾಡಿಸಿದ್ದರು. ಸ್ಕ್ಯಾನರ್ ಮೂಲಕ ಹಣ ಪಾವತಿ ಮಾಡಿರುವುದಾಗಿ ಮೊಬೈಲ್ನ ಸ್ಕ್ರೀನ್ಶಾಟ್ ತೋರಿಸಿದ್ದರು.ಆರಂಭದಲ್ಲಿ ಅಂಗಡಿ ಮಾಲೀಕರು ಹಣ ಪಾವತಿಯಾಗಿದೆ ಎಂದು ನಂಬಿಕೊಂಡಿದ್ದರು. ಆದರೆ, ಅಂಗಡಿಯ ಬ್ಯಾಂಕ್ ಖಾತೆಗೆ ಹಣ ಜಮೆ ಆಗಿರಲಿಲ್ಲ. ನಂತರ ರಶ್ಮಿ ನೀಡಿದ್ದ ಮೊಬೈಲ್ ಸಂಖ್ಯೆಗೆ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಮತ್ತೊಮ್ಮೆ ಕರೆ ಮಾಡಿದಾಗ ಪುರುಷರೊಬ್ಬರು ಮಾತನಾಡಿ ರಶ್ಮಿ ಎಂಬ ಹೆಸರಿನವರು ಯಾರೂ ಇಲ್ಲ ಎಂದು ಉತ್ತರಿಸಿದ್ದರು. ಆಕೆ ಮೋಸ ಮಾಡಿರುವುದನ್ನು ಮನಗಂಡ ಮಾಲೀಕರು ದೂರು ನೀಡಿದ್ದರು. ಪೊಲೀಸರು ಆಕೆಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

More articles

Latest article