ಮೈಸೂರು: ನಗರದ ಕೋಟೆ ಆಂಜನೇಯಸ್ವಾಮಿ ದೇಗುಲದ ಬಳಿ ಸ್ವಚ್ಛತಾ ಕಾರ್ಯ ನಡೆಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಜೆಡಿಎಸ್-ಬಿಜೆಪಿ ಪಾದಯಾತ್ರೆಯಿಂದ ಆದ ಕೊಳಕು ತೆಗೆಯಲು ಸ್ವಚ್ಛತೆ ನಡೆಸಿರುವುದಾಗಿ ಹೇಳಿದ್ದಾರೆ.
ಮೈಸೂರಿಗೆ ಕಳ್ಳರು, ಸುಳ್ಳರು, ಭ್ರಷ್ಟರ ಪಾಪದ ಧೂಳು ತಲುಪಿದೆ. ಪಾಪದ ಧೂಳು ತೊಲಗಲಿ ಎಂದು ಗೋಮಾತ್ರ ಸಿಂಪಡಿಸುವ ಮೂಲಕ ವಾಟಾಳ್ ನಾಗರಾಜ್ ಪ್ರತಿಭಟಿಸಿದರು.
ಅಪವಿತ್ರವಾದ ಮೈಸೂರು ಶುದ್ದವಾಗಲಿ ಎಂದು ಗೋಮೂತ್ರ ಸಿಂಪಡಿಸಿದ ಅವರು ರಾಜ್ಯ ರಾಜಕೀಯ ನಾಯಕರು ಮತ್ತು ವಿದ್ಯಮಾನಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪಕ್ಷಗಳ ನಾಯಕರು ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಿದ್ದರು.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿದ್ದನ್ನು ವಾಟಾಳ್ ನಾಗರಾಜ್ ಇತ್ತೀಚಿಗೆ ಬಲವಾಗಿ ಖಂಡಿಸಿದ್ದರು. ಜನರಿಂದ ಆಯ್ಕೆಯಾದ ಸರ್ಕಾರವನ್ನು ವಾಮಮಾರ್ಗದಲ್ಲಿ ಉರುಳಿಸುವ ಯತ್ನ ಬೇಡ ಎಂದು ಅವರು ಆಗ್ರಹಿಸಿದ್ದರು.