ಭಾರಿ ಮಳೆಗೆ ಕುಸಿದು ಬಿದ್ದ ವಾಸದ ಮನೆಯ ಗೋಡೆ

ಹಾಸನ : ಭಾರಿ ಮಳೆಗೆ ವಾಸದ ಮನೆಯ ಗೋಡೆ ಕುಸಿದು ಬಿದಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಕಲೇಶಪುರ ತಾಲ್ಲೂಕಿನ, ಕಬ್ಬಿನಗದ್ದೆ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಗ್ರಾಮದ ಕಮಲ ಎಂಬುವವರಿಗೆ ಸೇರಿದ ಮನೆ ಇದಾಗಿರುತ್ತದೆ.

ವಿಶೇಷ ಚೇತನ ಹಾಗೂ ಮಾತು ಬಾರದ ಕಮಲ, ತಾಯಿಯೊಂದಿಗೆ ವಾಸವಿದ್ದರು. ಈಗ ಮನೆ ಕಳೆದುಕೊಂಡು ಕಮಲಗೆ ದಿಕ್ಕುತೋಚದಂತಾಗಿದೆ.

ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ಒತ್ತಾಯಿಸಲಾಗಿದೆ.

More articles

Latest article

Most read