ಚಿಕನ್ ಕರಿ ಮಾಡಿದ್ರೆ ಹಿಂಗೆ ಬಾಯಲ್ಲಿ ನೀರು ಬರಬೇಕು..!

Most read

ನಾನ್ ವೆಜ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಆದರೆ ಒಂದೇ ರೀತಿಯ ಅಡುಗೆ ತಿನ್ನುವುದಕ್ಕೆ ಬೋರ್ ಆಗದೆ ಇರುವುದಿಲ್ಲ. ವೆರೈಟಿ ಬೇಕು ಎಂದಾಗ ಹೊಟೇಲ್ ಗೆ ಹೋಗ್ತೇವೆ. ಮನೆಯಲ್ಲಿಯೇ ವೆರೈಟಿ ಮಾಡಿಕೊಳ್ಳುವುದಕ್ಕೆ ಬಂದರೆ ಎಷ್ಟು ಖುಷಿ ಅಲ್ವಾ. ಅದರಲ್ಲೂ ಕಡಿಮೆ ಜನ ಇದ್ದಾಗ ಚಿಕನ್ ಗೊಜ್ಜೆಲ್ಲಾ ಮಾಡಿಕೊಂಡು ರುಚಿ ರುಚಿಯಾಗಿ ತಿನ್ನಬಹುದು. ಹಾಗಾದ್ರೆ ಚಿಕನ್ ಗೊಜ್ಜು ಮಾಡೋದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಬೇಕಾಗುವ ಪದಾರ್ಥಗಳು:

ಒಂದು ಕೆಜಿ ಚಿಕನ್
ಎಣ್ಣೆ
ಚಕ್ಕೆ ಲವಂಗ
ಏಲಕ್ಕಿ
ಈರುಳ್ಳಿ
ಟಮೋಟೋ
ಕರಿಬೇವು
ಉಪ್ಪು

ಮಾಡುವ ವಿಧಾನ: ಮೊದಲಿಗೆ ಒಂದು ಕಡಾಯಿಗೆ ಐದು ಟೇಬಲ್ ಸ್ಪೂನ್ ಎಣ್ಣೆ ಹಾಕಿ. ಕಾದ ಬಳಿಕ ಅರ್ಧ ಟೀ ಸ್ಪೂನ್ ಜೀರಿಗೆ, ಒಂದು ಚಕ್ಕೆ, ಎರಡ್ಮೂರು ಏಲಕ್ಕಿ, ಲವಂಗ ಹಾಕಿ ಫ್ರೈ ಮಾಡಿ. ಬಳಿಕ ಮೂರು ಸಣ್ಣ ಈರುಳ್ಳಿ ಕಟ್ ಮಾಡಿ ಹಾಕಿಕೊಳ್ಳಿ. ಅದಕ್ಕೊಂದಿಷ್ಟು ಕರಿಬೇವಿನ ಸೊಪ್ಪು, ನಾಲ್ಕು ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಫ್ರೈ ಆದ್ಮೇಲೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವ ತನಕ ಹುರಿದುಕೊಳ್ಳಿ. ಆಮೇಲೆ ಒಂದು ಟಮೋಟೋವನ್ನು ಸಣ್ಣದಾಗಿ ಕಟ್ ಮಾಡಿ ಹಾಕಿ, ಸ್ವಲ್ಪ ಉಪ್ಪು, ಅರಿಶಿನ, ಧನಿಯಾ ಪುಡಿ, ಖಾರದ ಪುಡಿ, ಚಿಕನ್ ಮಸಾಲ ಹಾಕಿ ಚೆನ್ನಾಗಿ‌ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಮುಚ್ಚಳ ಮುಚ್ಚಿ ಎರಡು ನಿಮಿಷ ಬೇಯಿಸಿ. ನಂತರ ಮುಚ್ಚಳ ತೆಗೆದು ಆ ಮಿಕ್ಸ್ ಮಸಾಲೆಗೆ ಚಿಕನ್ ಚೆನ್ನಾಗಿ ಮಿಕ್ಸ್ ಮಾಡಿ. ಮೂರ್ನಾಲ್ಕು ನಿಮಿಷ ಹಾಗೇ ಬಿಡಿ. ಮುಚ್ಚಳ ಮುಚ್ಚಿ ಮೀಡಿಯಮ್ ಫ್ಲೇಮ್ ನಲ್ಲಿ ಬೇಯಿಸಿ. ಚಿಕನ್ ನಲ್ಲಿ ನೀರು ಬಿಟ್ಟುಕೊಂಡಿರುತ್ತದೆ. ತೆಗೆದು ಚೆನ್ನಾಗಿ ಮಿಕ್ಸ್ ಮಾಡಿ, ಬಳಿಕ ಸ್ವಲ್ಪ ಖಾರದ ಪುಡಿ, ಧನಿಯಾ ಪುಡಿ ಹಾಕಿ ಮಿಕ್ಸ್ ಮಾಡಿ. ಬಿಸಿ ನೀರು ಹಾಕಿ ಬೇಯಿಸಿ. ಕೊನೆಯಲ್ಲಿ ಕಸೂರಿ ಮೇತಿ ಅಥವಾ ಕೊತ್ತಂಬರಿ ಸೊಪ್ಪು ಹಾಕಿ. ಇದು ಅನ್ನಕ್ಕೆ, ಚಪಾತಿಗೆ ಎಲ್ಲದಕ್ಕೂ ಅದ್ಭುತವಾಗಿರುತ್ತದೆ.

More articles

Latest article