ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮಲಲ್ಲಾ ಮಂದಿರವನ್ನು ನಿರ್ಮಿಸಿದ್ದಾರೆ. ಈಗ ಉಳಿದಿರುವುದು ಸೀತಾ ಮಾತೆಯ ಜನ್ಮಸ್ಥಳದಲ್ಲಿ ದೊಡ್ಡ ಸ್ಮಾರಕವನ್ನು ನಿರ್ಮಿಸುವ ಕೆಲಸ ಮಾತ್ರ ಎಂಧು ಹೇಳಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಸೀತಾಮರ್ಹಿ ಕ್ಷೇತ್ರದಲ್ಲಿ ಮಾತನಾಡಿದ ಅವರು, ಸೀತಾ ಮಾತೆಯ ಜೀವನದಂತೆ ಆದರ್ಶಪ್ರಾಯವಾದ ದೇವಾಲಯವನ್ನು ಯಾರಾದರೂ ನಿರ್ಮಿಸಲು ಸಾಧ್ಯವಾದರೆ, ಅದು ನರೇಂದ್ರ ಮೋದಿಯವರ ಬಳಿ ಮಾತ್ರ, ಅಂದರೆ ಅದು ಬಿಜೆಪಿ ಮಾತ್ರ”ಎಂದು ಅಮಿತ್ ಶಾ ಘೋಷಣೆ ಮಾಡಿದ್ದಾರೆ.
ಹಿಂದೂ ಧರ್ಮಗ್ರಂಥಗಳ ಪ್ರಕಾರ ರಾಜಾ ಜನಕನು ಸೀತಾಮರ್ಹಿಯ ಬಳಿ ಹೊಲವನ್ನು ಉಳುಮೆ ಮಾಡುತ್ತಿದ್ದಾಗ ಸೀತಾ ಮಾತೆಯು ಮಣ್ಣಿನ ಮಡಕೆಯಲ್ಲಿ ದೊರೆತಿದ್ದಳು.
ಇಂದು ಲಾಲು ಯಾದವ್ ಅಧಿಕಾರಕ್ಕಾಗಿ, ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಲು ಹೋಗಿ ಅತ್ಯಂತ ಹಿಂದುಳಿದವರ ವಿರುದ್ಧ ತನ್ನ ಇಡೀ ಜೀವನವನ್ನು ಕಳೆದ ಕಾಂಗ್ರೆಸ್ ಪಕ್ಷದ ಮಡಿಲಲ್ಲಿ ಕುಳಿತುಕೊಂಡಿದ್ದಾರೆ.
ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡುವ ಬಗ್ಗೆ ಕಾಂಗ್ರೆಸ್, ಆರ್ಜೆಡಿ ಎಂದಿಗೂ ಯೋಚಿಸಿರಲಿಲ್ಲ, ಅದನ್ನು ಮೋದಿ ಸರ್ಕಾರ ಮಾಡಿದೆ ಎಂದು “ಬಿಹಾರಕ್ಕೆ ‘ವಿಕಾಸರಾಜ್’ ಬೇಕು, ‘ಜಂಗಲ್ ರಾಜ್’ ಅಲ್ಲ,” ಶಾ ಹೇಳಿದರು.