ಉದುರುದುರು ಮೊಟ್ಟೆಯಿರುವಂತೆ ಮಾಡಿ ತಿನ್ನಿ ಎಗ್ ರೈಸ್

Most read

ಎಗ್ ರೈಸ್ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಹಾಗಂತ ಒಂದೇ ರೀತಿಯ ಎಗ್ ರೈಸ್ ಮಾಡೋದಕ್ಕೂ ಬೋರ್ ಅಲ್ವಾ. ಅದರಲ್ಲೂ ವಿಭಿನ್ನತೆ ಇದ್ರೆ ಖಂಡಿತ ಇಷ್ಟ ಆಗುತ್ತೆ. ಹಾಗಾದ್ರೆ ಇವತ್ತಿನ ಎಗ್ ರೈಸ್ ಅದ್ಭುತವಾಗಿದೆ. ಟೇಸ್ಟ್ ಇನ್ನು ಸೂಪರ್. ಹಾಗಾದ್ರೆ ಅದನ್ನ ಮಾಡೋದು ಹೇಗೆ..? ಬೇಕಾಗುವ ಪದಾರ್ಥಗಳನ್ನು ನೋಡಿಕೊಳ್ಳಿ.

ಬೇಕಾಗುವ ಪದಾರ್ಥಗಳು:

ಎಗ್
ಚಿಲ್ಲಿ ಫ್ಲೆಕ್ಸ್
ಕ್ಯಾರೆಟ್
ಸ್ಪ್ರಿಂಗ್ ಆನಿಯನ್
ಹಸಿಮೆಣಸಿನಕಾಯಿ
ಪೆಪ್ಪರ್
ಅರಿಶಿನ
ಉಪ್ಪು
ಎಣ್ಣೆ

ಎಗ್ ರೈಸ್ ಮಾಡುವ ವಿಧಾನ:

ಒಂದು ಬೌಲ್ ಗೆ ನಾಲ್ಕು ಮೊಟ್ಟೆಯನ್ನು ಒಡೆದು ಹಾಕಿ ಇಟ್ಟುಕೊಳ್ಳಿ. ಅದಕ್ಕೆ ಕಾಲು ಟೀ ಸ್ಪೂನ್ ಉಪ್ಪು ಹಾಕಿ ಚೆನ್ನಾಗಿ ಬೀಟ್ ಮಾಡಿಕೊಳ್ಳಿ. ಬಳಿಕ ಕಡಾಯಿಗೆ ಎಣ್ಣೆ ಹಾಕಿ, ಕಾದ ಮೇಲೆ ಮೊಟ್ಟೆಯನ್ನ ಹಾಕಿ. ಸೌಟ್ ನಿಂದ ತಿರುವುತ್ತಾ ಇರಿ. ಉದುರಾಗಿ ಬರುವಂತೆ ನೋಡಿಕೊಳ್ಳಿ. ಮೊಟ್ಟೆ ಎಲ್ಲಾ ಉದುರು ಉದುರಾಗಿ ಬಂದ ಮೇಲೆ ಅದನ್ನ ಒಂದು ಕಡೆ ತೆಗೆದುಕೊಳ್ಳಿ.

ಮತ್ತೆ ಅದೇ ಕಡಾಯಿಗೆ ಎಣ್ಣೆ ಹಾಕಿ ಚಿಕ್ಕ ಚಿಕ್ಕದಾಗಿ ಕಟ್ ಮಾಡಿದ ಬೆಳ್ಳುಳ್ಳಿ, ಶುಂಠಿ ಹಾಕಿ. ಸಣ್ಣದಾಗಿ ಕಟ್ ಮಾಡಿದ ಕ್ಯಾರೆಟ್, ಹಸಿಮೆಣಸಿನಕಾಯಿ ಹಾಕಿ ಫ್ರೈ ಮಾಡಿಕೊಳ್ಳಿ. ಅನ್ನವನ್ನು ಆ ಫ್ರೈಗೆ ಹಾಕಿ. ಅನ್ನದ ಮೇಲೆ ಚಿಲ್ಲಿ ಪ್ಲೆಕ್ಸ್ ಹಾಕಿ. ಕಾಲು ಟೀ ಸ್ಪೂನ್ ಪೆಪ್ಪರ್, ಸ್ವಲ್ಪ ಉಪ್ಪು ಹಾಕಿ ತಿರುವಿ. ಒಂದು ನಿಮಿಷ ಫ್ರೈ ಮಾಡಿಕೊಳ್ಳಿ. ಅದಕ್ಕೆ ಫ್ರೈ ಮಾಡಿರುವ ಎಗ್ ಹಾಕಿ, ಸ್ಪ್ರಿಂಗ್ ಆನಿಯನ್ ಎಷ್ಟು ಇಷ್ಟವಾಗುತ್ತೋ ಅಷ್ಟು ಹಾಕಿಕೊಳ್ಳಿ. ಎಲ್ಲವನ್ನು ಹಾಕಿ ಮಿಕ್ಸ್ ಮಾಡಿ, ತಟ್ಟೆಗೆ ಹಾಕಿಟ್ಟುಕೊಳ್ಳಿ. ಮಾಮೂಲಿ ಎಗ್ ರೈಸ್ ಗಿಂತ ಇದು ಮತ್ತಷ್ಟು ವಿಭಿನ್ನವಾಗಿರುತ್ತೆ.

More articles

Latest article