ವಿದೇಶದಿಂದ ಹಾರಿ ಬರಲಿದ್ದಾನಾ ಪ್ರಜ್ವಲ? ವಿಮಾನ ನಿಲ್ದಾಣಗಳಲ್ಲಿ SIT ಪಹರೆ.

ಬೆಂಗಳೂರು: ಕರ್ನಾಟಕ ಕಂಡು ಕೇಳರಿಯದಂಥ ಕಾಮಕಾಂಡ ನಡೆಸಿ ವಿದೇಶಕ್ಕೆ ಪರಾರಿಯಾಗಿರುವ ಸಂಸದ, ಹಾಸನ NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಇಂದು ಆಗಮಿಸುವ ಸಾಧ್ಯತೆ ಇದ್ದು, ವಿಮಾನ ನಿಲ್ದಾಣದಲ್ಲೇ ಆತನನ್ನು SIT ಪೊಲೀಸರು ಬಂಧಿಸುವ ಸಾಧ್ಯತೆ ಇದೆ.

ಪ್ರಜ್ವಲ್ ರೇವಣ್ಣ ಸದ್ಯ ದುಬೈನಲ್ಲಿದ್ದು, ದುಬೈನಿಂದ ವಿಮಾನಗಳು ಬರುವ ಮಂಗಳೂರು, ಕೊಚ್ಚಿ, ಗೋವಾ, ಬೆಂಗಳೂರು ವಿಮಾನ ನಿಲ್ದಾಣಗಳ ಮೇಲೆ SIT ಪೊಲೀಸರು ಕಣ್ಣಿಟ್ಟಿದ್ದಾರೆ‌.

ಬೆಳಗ್ಗೆ 7.55ರ ವಿಮಾನದಲ್ಲಿ ಪ್ರಜ್ವಲ್ ರೇವಣ್ಣ ಬರಬಹುದೆಂದು SIT ಪೊಲೀಸರು ಬಲೆ ಬೀಸಿ ಕಾದಿದ್ದರು. ಆದರೆ ಆ ವಿಮಾನದಲ್ಲಿ ಆತ ಬಾರದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಳಿಕ ಆಗಮಿಸುವ ಮೂರು ವಿಮಾನಗಳ ಮೇಲೆ ನಿಗಾ ಇಡಲಾಗುವುದು. ಪ್ರಜ್ವಲ್ ಬಂದ ತಕ್ಷಣ ಬಂಧಿಸಲಿರುವ ಸ್ಥಳೀಯ ಪೊಲೀಸರು ಕಾನೂನು ಪ್ರಕ್ರಿಯೆಗಳಿಗೆ ಒಳಪಡಿಸಲಿದ್ದಾರೆ.

ಈ ನಡುವೆ ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡ್ನಾಪ್ ಆಗಿದ್ದ ಸಂತ್ರಸ್ಥೆಯನ್ನು ಪೊಲೀಸರು ರಕ್ಷಿಸಿದ್ದು, ಆಕೆಯ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ.

ಹುಣಸೂರಿನ ಕಾಳೇನಹಳ್ಳಿಯ ಎಚ್.ಡಿ. ರೇವಣ್ಣ ಆಪ್ತನ ತೋಟದ ಮನೆಯಲ್ಲಿದ್ದ ಸಂತ್ರಸ್ತೆಯನ್ನು ನಿನ್ನೆ ಕರೆತಂದು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಮಾನಸಿಕವಾಗಿ ನೊಂದಿರುವ ಆಕೆಗೆ ಕೌನ್ಸಿಲಿಂಗ್ ನೀಡಲಾಗುತ್ತಿದೆ. SIT ಅಧಿಕಾರಿ ಸೀಮಾ ಲಾಟ್ಕರ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

More articles

Latest article

Most read