ಸುರತ್ಕಲ್ ಹೊಸಬೆಟ್ಟು ಬೀಚ್ ನಲ್ಲಿ ಮೂವರು ಸಮುದ್ರಪಾಲು

Most read

ಮಂಗಳೂರು: ಮಂಗಳೂರು ಸುರತ್ಕಲ್ ನ ಹೊಸಬೆಟ್ಟು ಎಂಬಲ್ಲಿ ಕಡಲ ತೀರಕ್ಕೆ ವಿಹಾರಕ್ಕೆ ಎಂದು ಆಗಮಿಸಿದ್ದ ಬೆಂಗಳೂರಿನ ಮೂವರು ಸಮುದ್ರದ ಪಾಲಾಗಿದ್ದಾರೆ.

ಬೀದರ್ ಜಿಲ್ಲೆಯ ಹಂಗಾರಗ ಪರಮೇಶ್ವರ್ , ಚಿತ್ರದುರ್ಗ ಜಿಲ್ಲೆಯ ಉಪ್ಪರಿಗೇನಹಳ್ಳಿ ಯ ಮಂಜುನಾಥ್, ಶಿವಮೊಗ್ಗದ ಶಿವಕುಮಾರ್, ಬೆಂಗಳೂರಿನ ಸತ್ಯವೇಲು ಈಜಾಡಲು ನೀರಿಗೆ ಇಳಿದಿದ್ದಾರೆ. ಈ ಸಂದರ್ಭ, ಮಂಜುನಾಥ್, ಶಿವಕುಮಾರ್, ಸತ್ಯವೇಲು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಶಿವಕುಮಾರ್ ಮತ್ತು ಸತ್ಯವೇಲು ಎಂಬವರ ಮೃತದೇಹ ಪತ್ತೆಯಾಗಿದೆ. ಮಂಜುನಾಥ್ ಅವರ ಶವಕ್ಕಾಗಿ ಹುಡುಕಾಟ ನಡೆಯುತ್ತಿದೆ. ಇವರೆಲ್ಲರೂ ಬೆಂಗಳೂರಿನ ಎಎಂಸಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.

ಇವರು ಹೊಸಬೆಟ್ಟು ಬೀಚ್ ಬಳಿ ಪ್ರವಾಸಕ್ಕೆಂದು ಆಗಮಿಸಿದ್ದು, ನೀರಿನ ಆಳ ತಿಳಿಯಲಾರದೆ ಕೊಚ್ಚಿಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಮಂಗಳವಾರ ರಾತ್ರಿ ಬೆಂಗಳೂರಿನಿಂದ ಹೊರಟು ಮಂಗಳೂರಿಗೆ ಅವರು ಬಂದಿದ್ದರು. ಬುಧವಾರ ಸುಮಾರು 12.30ರ ವೇಳೆ ಸುರತ್ಕಲ್ ಹೊಸಬೆಟ್ಟು ಬೀಚ್ ಬಳಿ ಆಗಮಿಸಿದ್ದಾರೆ. ಅಲ್ಲಿನ ಜೆಟ್ಟಿ ಬಳಿ ಇರುವ ಬೀಚ್ ಗೆ ಆಗಮಿಸಿದಾಗ ಈ ದುರಂತ ನಡೆದಿದೆ.

More articles

Latest article