ಬೆಂಗಳೂರು: ಕಾಲೇಜು ಹುಡುಗ ಹುಡುಗಿಯರಲ್ಲಿ ಹುಟ್ಟು ಪ್ರಮೇಕತೆಗಳ ಸನಿಮಾಗಳಿಗೆ ಲೆಕ್ಕವೇ ಇಲ್ಲವೇನೋ? ಬ್ಲಾಕ್ ಅಂಡ್ ವೈಟ್ ಸಿನಿಮಾ ಕಾಲದಿಂದಲೂ ಕಾಲೇಜುಗಳಲ್ಲಿ ಹುಟ್ಟುವ ಲವ್ ಸ್ಟೋರಿಗಳನ್ನಿಟ್ಟುಕೊಂಡು ಸಿನಿಮಾಗಳು ಎಲ್ಲ ಭಾಷೆಗಳ್ಲೂ ಸರ್ವೇ ಸಾಮಾನ್ಯವಾಗಿವೆ. ಆದರೆ ಈದೀಗ ‘ಕಾಲೇಜ್ ಕಲಾವಿದ’ ಹೆಸರಿನ ಸಿನಿಮಾವೊಂದು ಸಿದ್ಧವಾಗಿದ್ದು, ತೆರಗೆ ಅಪ್ಪಳಿಸಲು ಸಿದ್ಧವಾಗಿದೆ. ಸಿನಿಮಾ ಟೈಟಲ್ ಕಾಲೇಜು ಕಾಲೇಜು ಹುಡುಗ ಹುಡುಗಿಯರಷ್ಟೇ ಆಕರ್ಷಕವಾಗಿದೆ.
ಸಕಲ ಕಲಾವಲ್ಲಭರು ಇಲ್ಲದ ಕಾಲೇಜು ಯಾವುದಿದೆ? ಎಲ್ಲ ರೀತಿಯ ಕಲಾವಿದರ ಸಂಗಮ ಕಾಲೇಜು ಎಂದರೆ ಅತಿಶಯೋಕ್ತಿಯಾಗಲಾರದು. ‘ಕಾಲೇಜ್ ಕಲಾವಿದ’ ಸಿನಿಮಾದಲ್ಲಿ ಕಲಾವಿದ ಹೇಗೆ ಮೂಡಿ ಬರಲಿದ್ದಾನೆ ಎನ್ನುವುದೇ ಸಿನಿಮಾದ ಹೂರಣ. ನೀವು ಊಹಿಸಿದಂತೆ ಚಿತ್ರಕತೆ ಲವ್ ಸ್ಟೋರಿಯೇ ಆಗಿದ್ದರೂ ಇಂತಹುದೊಂದು ಲವ್ ಇರಲು ಸಾಧ್ಯವೇ ಎಂದು ಸಿನಿಮಾ ನೋಡಿದ ನಂತರ ಕಾಡದೆ ಇರದು. ಅದುವೇ ಈ ಸಿನಿಮಾದ ಸ್ಪೆಷಲ್. ಈ ಸಿನಿಮಾದಿಂದ ಎರಡು ಹಾಡುಗಳು “ಆನಂದ್ ಆಡಿಯೋ”ನಲ್ಲಿ ಬಿಡುಗಡೆಯಾಗಿವೆ.
ಖ್ಯಾತ ನಟ ರಮೇಶ್ ಅರವಿಂದ್, “ಸಿಂಗಾರ ನೀನೆ” ಹಾಡನ್ನು ರಿಲೀಸ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ” ಹೊಂಟಾಯ್ತು ಹಮ್ಮೀರಾ “ಎಂಬ ಎರಡನೇ ಹಾಡನ್ನು ಭಾರತೀಯ ಚಿತ್ರರಂಗದಲ್ಲೇ ಮೊದಲನೇ ಭಾರಿಗೆ ವಿಭಿನ್ನವಾಗಿ, ಬೈಕ್ ಲಾಗರ್ಸ್ ಲಾಗಿದೆ. ಈ ಮುಂಗಾರು ಸೀಸನ್ ಗೆ ಹೇಳಿ ಮಾಡಿಸಿದ ಹಾಗಿದೆ.
ಕಾಲೇಜ್ ಕಲಾವಿದ ಸಿನಿಮಾ ಚಿತ್ರಕತೆಯನ್ನು ಸಂಜಯ್ ಮಳವಳ್ಳಿ ಬರೆದು ನಿರ್ದೇಶನ ಮಾಡಿದ್ದಾರೆ. ಸಂಜಯ್ ಮಳವಳ್ಳಿ ಸ್ಯಾಂಡಲ್ ವುಡ್ ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ. ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರಹಗಾರರಾಗಿ ಗಮನ ಸೆಳೆದಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸಹ ನಿರ್ದೇಶಕರಾಗಿಯೂ ಅನುಭವ ಗಳಿಸಿಕೊಂಡ ಹಿರಿಮೆ ಸಂಜಯ್ ಅವರದ್ದು. ಸಿನಿಮಾ ಮೇಲೆ ಒಂದು ರೀತಿಯ ವ್ಯಾಮೋಹ ಹೊಂದಿರುವ ಸಂಜಯ್ ಅವರ ನಿರ್ದೇಶಕನಾಗಬೇಕೆಂಬ ಕನಸನ್ನು ಕಾಲೇಜ್ ಕಲಾವಿದನ ಮೂಲಕ ನಸು ಮಾಡಿಕೊಂಡಿದ್ದಾರೆ. ಇಡೀ ಚಿತ್ರ ಆರಂಭದಿಂದ ಅಂತ್ಯದವರೆಗೂ ನಿರ್ದೇಶಕ ಸಂಜಯ್ ಅವರ ಹಿಡಿತವನ್ನು ಕಾಣಬಹುದು. ಚಿತ್ರವನ್ನು ವೀಕ್ಷಿಸುರುವ ಗಣ್ಯರು ಕನ್ನಡಕ್ಕೆ ಕಾಲೇಜು ಕಲಾವಿದ ಒಂದು ಉತ್ತಮ ಚಿತ್ರ ಮತ್ತು ಸಂಜಯ್ ಒಬ್ಬ ಭವಿಷ್ಯದ ನಿರ್ದೇಶಕ ಎಂದು ಹರಸಿದ್ದಾರೆ.
ಕಾಲೇಜ್ ಕಲಾವಿದ ಗಜಾನನ ಫಿಲ್ಮ್ಸ್ ಬ್ಯಾನರ್ ಡಿಯಲ್ಲಿ ತರುಣ್ ಶರ್ಮಾ ನಿರ್ಮಾಣ ಮಾಡಿದ್ದು, ಆರವ್ ಸೂರ್ಯ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಆರವ್ ಸೂರ್ಯ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿದ ಅನುಭವ ಹೊಂದಿದ್ದಾರೆ. ಇದು ಅವರ ಮೂರನೆಯ ಕಾಣಿಕೆ. ಇದರ ಜೊತೆಗೆ ಧಾರಾವಾಹಿಗಳಲ್ಲೂ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಚೈತ್ರ ಲೋಕನಾಥ್ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಉಳಿದಂತೆ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ಹುಲಿ ಕಾರ್ತಿಕ್ ಮತ್ತು ಹರಿಣಿ ಶ್ರೀಕಾಂತ್ ಹಾಗೂ ರಮೇಶ್ ಭಟ್, ಶೈಲಪುತ್ರಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿಖಿಲ್, ನಂದಿನಿ, ದಿನೇಶ್ ಕುಲಕರ್ಣಿ, ನವೀನ್,ನಿ ರಂತ್ ಸೂರ್ಯ ಅವರು ನಾಯಕ ನಟನ ಸ್ನೇಹಿತರಾಗಿ ಬಣ್ಣ ಹಚ್ಚಿದ್ದಾರೆ.
ಲವ್, ಕಮರ್ಷಿಯಲ್, ಥ್ರಿಲ್ಲಿಂಗ್ ಜಾನಾರ್ ಇರುವ ಈ ಚಿತ್ರಕ್ಕೆ ಆನಂದ್ ಸುಂದರೇಶ ಅವರ ಛಾಯಾಗ್ರಹಣ ಮೋಡಿ ಮಾಡಿದರೆ ಮಹೇಶ್ ಗಂಗಾವತಿ ಸಂಕಲನ, ಸಂಗೀತ ನಿರ್ದೇಶಕರಾಗಿ ಸುರಾಜ್ ಜೋಯಿಸ್ ತಮ್ಮ ಕೈಚಳಕ ತೋರಿಸಿದ್ದಾರೆ.
ಶಾಲಿನಿ ಆರ್ಟ್ಸ್ ಚಿತ್ರವನ್ನು ಹಂಚಿಕೆ ಮಾಡಿದ್ದಾರೆ. ರಮೀತ್ ಏಲಕ್ಕಿ ಚಿತ್ರದ ಪ್ರಮೋಷನ್ ಅನ್ನು ನಿಭಾಯಿಸಿದ್ದಾರೆ. ಸಿನಿಮಾದಲ್ಲಿರುವ ನಾಲ್ಕು ಹಾಡುಗಳು ಪದೇ ಪದೇ ಗುನುಗುವಂತಿವೆ. ಒಟ್ಟಾರೆ ಕಾಲೇಜ್ ಕಲಾವಿದ ಪ್ರಯೋಗಾತ್ಮಕ ಪ್ರೀತಿಯ ಪಯಣದ ಕಥೆಯಾಗಿದ್ದು ವೀಕ್ಷಕರ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ ಎನ್ನುವುದಂತೂ ಸತ್ಯ.