ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷ್ಯ ಖಂಡಿಸಿ ಖಾಸಗಿ ಆಸ್ಪತ್ರೆ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

ಕೋಲಾರ :  ಶ್ರೀನಿವಾಸಪುರ ತಾಲ್ಲೂಕು  ಸೋಮಯಾಜನಹಳ್ಳಿ ಪಂಚಾಯತಿಗೆ ಸೇರಿದ ಓಜಲಹಳ್ಳಿ ಗ್ರಾಮದ ರೈತ ಮಹಿಳೆ ಯಶಸ್ವಿನಿ ಎಂಬಾಕೆಯು ಕಿಡ್ನಿ ಕಸಿ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದು, ಈ ವೇಳೆ  ಶ್ರೇಯಾ ಆಸ್ಪತ್ರೆಯ ವೈದ್ಯರು  ಆಕೆಯ ಮೂತ್ರಕೋಶಕ್ಕೂ ಸಹ ತೊಂದರೆಯನ್ನು ಉಂಟು ಮಾಡಿದ್ದು, ಆ ಸಂದರ್ಭದಲ್ಲಿ  ಆಕೆ ಪ್ರಜ್ಞಾಹೀನ ಸ್ಥಿತಿಗೆ  ತಲುಪಿದ್ದಾಳೆ. 

ತಕ್ಷಣವೇ ಅವರ ಕುಟುಂಬವು ಆಕೆಯನ್ನು  ಹೆಚ್ಚಿನ ಚಿಕಿತ್ಸೆಗೆ  ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಪ್ರಸ್ತುತ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರಿಂದ ಯಶಸ್ವಿನಿ ಅವರ ಕುಟುಂಬ ಅತಿ ಹೆಚ್ಚಿನ ಹಣವನ್ನು ವ್ಯಯಿಸಬೇಕಾಗಿದ್ದು, ಅವರ ಕುಟುಂಬವನ್ನು ಚಿಂತೆಗೀಡು ಮಾಡಿದೆ. 

ಜಿಲ್ಲಾ ಆರೋಗ್ಯ ಅಧಿಕಾರಿಗಳು ಶ್ರೇಯಾ ಆಸ್ಪತ್ರೆ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಾಗಿದೆ, ಅಲ್ಲದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷ ತೋರಿದ ವೈದ್ಯರ ವಿರುದ್ಧ ದೂರು ದಾಖಲು ಮಾಡುವಂತೆ ಆಕೆಯ ಕುಟುಂಬದೊಂದಿಗೆ ಆಸ್ಪತ್ರೆಯ ಮುಂಭಾಗ ಶ್ರೀನಿವಾಸಪುರ ತಾಲೂಕು ದಲಿತ ಸಂಘಟನೆಗಳ ಮುಖಂಡರಾದ ರಾಮಾಂಜಮ್ಮ ಮತ್ತಿತರರು  ಪ್ರತಿಭಟನೆಯಲ್ಲಿ ಒತ್ತಾಯಿಸುತ್ತಿದ್ದಾರೆ.

More articles

Latest article

Most read