ಲೋಕಸಭಾ ಚುನಾವಣೆ | ತಮಿಳುನಾಡಿನಿಂದ ಶಶಿಕಾಂತ್ ಸೆಂಥಿಲ್ ಕಣಕ್ಕಿಳಿಸಿದ ಕಾಂಗ್ರೆಸ್

ಕರ್ನಾಟಕ-ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ ಮತ್ತು ಕಾಂಗ್ರೆಸ್ ಚುನಾವಣಾ ವಾರ್ ರೂಮ್ ಮುಖ್ಯಸ್ಥ ಎಸ್ ಶಶಿಕಾಂತ್ ಸೆಂಥಿಲ್ ಅವರು ತಮಿಳುನಾಡಿನ ತಿರುವಳ್ಳೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಹೌದು, ಈ ಮೂಲಕ ಅವರು ಚುನಾವಣಾ ಅಖಾಡಕ್ಕೆ ಪಾದಾರ್ಪಣೆ ಮಾಡಿದ್ದಾರೆ‌. ಏಪ್ರಿಲ್ 19ಕ್ಕೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಶೀಲ ಒಕ್ಕೂಟದ (ಎಸ್‌ಪಿಎ) ಭಾಗವಾಗಿ ತಮಿಳುನಾಡಿನಲ್ಲಿ ಸ್ಪರ್ಧಿಸಲಿರುವ ಒಂಬತ್ತು ಸ್ಥಾನಗಳ ಪೈಕಿ ಏಳು ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ. ಪಕ್ಷವು ಐದು ಹಾಲಿ ಸಂಸದರನ್ನು ಮತ್ತೆ ಕಣಕ್ಕಿಳಿಸಿದೆ. … Continue reading ಲೋಕಸಭಾ ಚುನಾವಣೆ | ತಮಿಳುನಾಡಿನಿಂದ ಶಶಿಕಾಂತ್ ಸೆಂಥಿಲ್ ಕಣಕ್ಕಿಳಿಸಿದ ಕಾಂಗ್ರೆಸ್